For the best experience, open
https://m.justkannada.in
on your mobile browser.

ಹೆಣ್ಣು ಭ್ರೂಣ ಹತ್ಯೆ ಪತ್ತೆ ಮತ್ತು ಹಸುಗೂಸು ಮಾರಾಟ ಪ್ರಕರಣದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಪೊಲೀಸ್ ಕಮಿಷನರ್‍ ದಯಾನಂದ್.

12:16 PM Nov 28, 2023 IST | prashanth
ಹೆಣ್ಣು ಭ್ರೂಣ ಹತ್ಯೆ ಪತ್ತೆ ಮತ್ತು ಹಸುಗೂಸು ಮಾರಾಟ ಪ್ರಕರಣದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಪೊಲೀಸ್ ಕಮಿಷನರ್‍ ದಯಾನಂದ್

ಬೆಂಗಳೂರು,ನವೆಂಬರ್,28,2023(www.justkannada.in):  ಮಂಡ್ಯದ ಅಲೆಮನೆಯಲ್ಲಿ ನಡೆಯುತ್ತಿದ್ದ ಹೆಣ್ಣು ಭ‍್ರೂಣ ಹತ್ಯೆ ದಂಧೆ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಹಸುಗೂಸು ಮಾರಾಟ ಪ್ರಕರಣವನ್ನ ಬೇಧಿಸಿದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ವಿವರಿಸಿದರು.

ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ಕಮಿಷನರ್ ಬಿ.ದಯಾನಂದ್, ಹೆಣ್ಣು ಭ್ರೂಣ ಹತ್ಯೆ ಪತ್ತೆ ಪ್ರಕರಣ ಸಂಬಂಧ ಇಬ್ಬರು ವೈದ್ಯರು  ಮೂವರು ಲ್ಯಾಬ್ ಟೆಕ್ನಿಷಿಯನ್ ಸೇರಿ 9 ಬಂಧಿಸಲಾಗಿದೆ. ಅಲೆಮನೆಯಲ್ಲಿಯೇ ಶೆಡ್ ನಿರ್ಮಾಣ ಮಾಡಿ ದಂಧೆ ನಡೆಸುತ್ತಿದ್ದರು . ಒಂದು ಕೃತ್ಯವೆಸಗಲು 25ರಿಂದ 30 ಸಾವಿರ ಪಡೆಯುತ್ತಿದ್ದರು.  ಮೂರುತಿಂಗಳ ಅವಧಿಯಲ್ಲಿ 342 ಹೆಣ್ಣು ಭ್ರೂಣ ಹತ್ಯೆ ಮಾಡಿದ್ದಾರೆ.  ಬಂಧಿತ ವೀರೇಶ್ ಸಿದ್ದೇಶ್ ಈ ಹಿಂದೆ ಕಿಡ್ನಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಮಾಹಿತಿ ನೀಡಿದರು.

ಅ.15 ರಂದು ಅನುಮಾನದ ಮೇಲೆ ಪೊಲೀಸರಿಂದ ವಾಹನ ತಪಾಸಣೆ ಮಾಡಲಾಗಿತ್ತು. ಬಳಿಕ ವಾಹನ ಚೇಸ್ ಮಾಡಿ ಹಿಡಿದು ವಿಚಾರಣೆ ಮಾಡಿದಾಗ ದಂಧೆ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.n

ಇನ್ನು ನಗರದ ಆರ್ ಆರ್ ನಗರದಲ್ಲಿ ಹಸುಗೂಸು ಮಾರಾಟ ಪ್ರಕರಣ ಸಂಬಂಧ ಮಹತ್ವದ ಮಾಹಿತಿಯನ್ನು ಹಂಚಿಕೊಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ , ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ 20 ದಿನದ ಹಸುಗೂಸು ಮಾರಾಟ ಮಾಡುತ್ತಿದ್ದ ಮಾಹಿತಿ ಬಂದ ಕೂಡಲೇ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸ್ವಿಫ್ಟ್ ಕಾರಿನಲ್ಲಿ ಮಾರಾಟ ಮಾಡುತ್ತಿದ್ದ  ಗಂಡು ಮಗುವನ್ನು ರಕ್ಷಿಸಿದ್ದಾರೆ. ಬಂಧಿತ ಆರೋಪಿಗಳು ಮೂಲತಹ ತಮಿಳುನಾಡು ಮೂಲದವರು. ಬಡ ಮಹಿಳೆಯರಿಗೆ ಗರ್ಭಧಾರಣೆ ಮಾಡಿಸಿ ಮಗು ಪಡೆಯುತ್ತಿದ್ದರು. ಆ ಮಗುವನ್ನು 8 ರಿಂದ 10 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ಹೀಗೆ ಹತ್ತಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಇದೆ. ತಮಿಳುನಾಡಿನ 4 ಆಸ್ಪತ್ರೆಗಳಲ್ಲಿ ಕೃತ್ಯ ನಡೆದಿರುವ ಬಗ್ಗೆ ಮಾಹಿತಿ ಇದೆ. ಆ ನಿಟ್ಟಿನಲ್ಲಿ ಆರ್ ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

Key words: Police Commissioner -Dayanand  - detection – female- fetus- killing

Tags :

.