For the best experience, open
https://m.justkannada.in
on your mobile browser.

ನಟ ದರ್ಶನ್ ಸೇರಿ 6 ಆರೋಪಿಗಳನ್ನ ಮತ್ತೆ ಕಸ್ಟಡಿಗೆ ಕೇಳಿದ ಪೊಲೀಸರು: ಪವಿತ್ರಗೌಡ ಸೇರಿ ಉಳಿದವರು ಜೈಲುಪಾಲು

04:27 PM Jun 20, 2024 IST | prashanth
ನಟ ದರ್ಶನ್ ಸೇರಿ 6 ಆರೋಪಿಗಳನ್ನ ಮತ್ತೆ ಕಸ್ಟಡಿಗೆ ಕೇಳಿದ ಪೊಲೀಸರು  ಪವಿತ್ರಗೌಡ ಸೇರಿ ಉಳಿದವರು ಜೈಲುಪಾಲು

ಬೆಂಗಳೂರು,ಜೂನ್,20,2024 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿ ಆರೋಪಿಗಳನ್ನ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು,  ಈ ಮಧ್ಯೆ ನಟ ದರ್ಶನ್ ಸೇರಿ 6 ಆರೋಪಿಗಳನ್ನ ಮತ್ತೆ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ದಾರೆ. ನಟ ದರ್ಶನ್,  ವಿನಯ್ ಪ್ರದೋಶ್ , ನಾಗರಾಜ್, ಲಕ್ಷ್ಮಣ್  ಧನರಾಜ್  ಆರು ಆರೋಪಿಗಳನ್ನ ಮತ್ತೆ ಪೊಲೀಸ್ ಕಸ್ಟಡಿಗೆ ಕೇಳಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದಾರೆ.

ಆರು ಆರೋಪಿಗಳನ್ನ ಹೊರತುಪಡಿಸಿ ಪ್ರಕರಣದ ಎ1 ಪವಿತ್ರಾಗೌಡ, ಎ3 ಪವನ್,   ಎ4 ರಾಘವೇಂದ್ರ 5 ನಂದೀಶ್,  ಎ6 ಜಗದೀಶ್,   ಎ7 ನಅನುಕುಮಾರ್, ಎ 8 ರವಿಶಂಕರ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು  ಜೈಲುಪಾಲಾಗಿದ್ದಾರೆ.

Key words: police, Custody, Accused, Darshan, court

Tags :

.