For the best experience, open
https://m.justkannada.in
on your mobile browser.

“ ಹೇ ಸಿನಾಮಿಕಾ ʼ ನಟ ಮನೆಯಲ್ಲಿ ಶವವಾಗಿ ಪತ್ತೆ..!

06:47 PM Jun 13, 2024 IST | mahesh
“ ಹೇ ಸಿನಾಮಿಕಾ ʼ ನಟ ಮನೆಯಲ್ಲಿ ಶವವಾಗಿ ಪತ್ತೆ

amil actor Pradeep K Vijayn was found dead in his home in Chenni

 ಚೆನ್ನೈ, ಜೂ .13,2024: (www.justkannada.in news) "ತೆಗಿಡಿ" ಮತ್ತು "ಹೇ! ಸಿನಾಮಿಕಾ" ಚಿತ್ರಗಳಲ್ಲಿ ಖಳ ಮತ್ತು ಹಾಸ್ಯ ಪಾತ್ರಗಳಲ್ಲಿ ತಮ್ಮ ನಟನಾ ಕೌಶಲ್ಯಕ್ಕಾಗಿ ಗುರುತಿಸಲ್ಪಟ್ಟ ಬಹುಮುಖ ತಮಿಳು ನಟ  ಪ್ರದೀಪ್‌ ಕೆ ವಿಜಯನ್‌ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ನಟನ ಆಪ್ತ ಸ್ನೇಹಿತ ಪ್ರದೀಪ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಒಂದೆರಡು ದಿನಗಳ ನಂತರ, ಆತ ಪ್ರದೀಪ್‌  ಮನೆಗೆ ತೆರಳಿದಾಗ, ಪ್ರದೀಪ್‌ ಮೃತ ದೇಹ ಪತ್ತೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸಾವಿಗೆ ನಿಜವಾಸ ಕಾರಣ ಪತ್ತೆಯಾಗಬೇಕಿದೆ.

ಚೆನ್ನೈನ ಪಾಲವಕ್ಕಂನ ಶಂಕರಪುರಂ ಮೊದಲ ಬೀದಿಯಲ್ಲಿ ಪ್ರದೀಪ್ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರು ಅವಿವಾಹಿತ ವ್ಯಕ್ತಿಯಾಗಿದ್ದರು. ಅವರಿಗೆ ಈ ಮೊದಲೇ ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆಯ ಸಮಸ್ಯೆಗಳಿದ್ದವು ಎನ್ನಲಾಗಿದೆ.

ಈ ನಡುವೆ ಪ್ರದೀಪ್‌ ಸ್ನೇಹಿತರು ಸಂಪರ್ಕಿಸಲು ಯತ್ನಿಸಿದ್ದರು. ಎರಡು ದಿನ ಕಳೆದರು ಯಾರ ಕರೆಗೂ ಪ್ರದೀಪ್‌ ಪ್ರತಿಕ್ರಿಯಿಸದಿದ್ದರಿಂದ ಚಿಂತೆಗೀಡಾದ ಸ್ನೇಹಿತ ಮನೆಗೆ ಖುದ್ದು ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಬಾಗಿಲು ತಟ್ಟಿದರೂ ಸ್ಪಂದಿಸದಿದ್ದಾಗ ಆತನ ಸ್ನೇಹಿತ ಆತಂಕಗೊಂಡು ನೀಲಂಕರೈ ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ. ಕರೆ ಹಿನ್ನೆಲೆಯಲ್ಲಿ ಅವರು ಪ್ರದೀಪ್‌ ಮನೆಗೆ ಬಲವಂತವಾಗಿ ಪ್ರವೇಶಿಸಿದರು. ಆಗ ಪ್ರದೀಪ್‌ ಶವವಾಗಿ ಪತ್ತೆ. ಆತನ ತಲೆಗೆ ಗಾಯವಾಗಿತ್ತು.

ಪ್ರದೀಪ್ ಅವರ ಮೃತದೇಹವನ್ನು ಹೆಚ್ಚಿನ ವಿವರವಾದ ಪರೀಕ್ಷೆಗಾಗಿ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

key words:  Tamil actor, Pradeep K Vijayn, was found dead, in his home, in Chenni

SUMMARY: 

Tamil actor was found dead in his home this Wednesday. recognised for his acting prowess in films like "Thegidi" and "Hey! Sinamika," A close friend of the actor tried reaching out to Pradeep, but couldn't connect with him over the phone. After a couple of days, he visits his home and finds Pradeep's dead body.

At the moment, police are investigating the situation surrounding his demise, and an official announcement has yet to be made.

Tags :

.