HomeBreaking NewsLatest NewsPoliticsSportsCrimeCinema

ಪ್ರಜ್ವಲ್ ಪ್ರಕರಣ ಸಿಬಿಐಗೆ ವಹಿಸಿ, ಇಲ್ಲ ಡಿಕೆಶಿ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ- ಪ್ರಹ್ಲಾದ್ ಜೋಶಿ ಆಗ್ರಹ.

03:59 PM May 10, 2024 IST | prashanth

ಹುಬ್ಬಳ್ಳಿ, ಮೇ 10,2024 (www.justkannada.in): ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಗೊಂದಲ ಇದೆ. ಹೀಗಾಗಿ ಪ್ರಕರಣವನ್ನ ಪ್ರಕರಣ ಸಿಬಿಐಗೆ ವಹಿಸಲಿ , ಇಲ್ಲ ಡಿಕೆ ಶಿವಕುಮಾರ್ ಡಿಸಿಎಂ ಹುದ್ದೆಗೆ  ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ತಪ್ಪಿಸಸ್ಥರಿಗೆ ಶಿಕ್ಷೆ ಆಗಲೇಬೇಕು. ಆದರೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ಆದರೆ ಎಸ್‌ಐಟಿ ತನಿಖೆ ಸಮರ್ಪಕವಾಗಿ ಸಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಏಪ್ರಿಲ್ 21ರಂದು ವಿಡಿಯೋಗಳು  ಬಿಡುಗೆಡಯಾಗಿದೆ. ವಿಡಿಯೋಗಳು ಹಾಸನ ಮಾತ್ರವಲ್ಲದೆ ಹುಬ್ಬಳ್ಳಿಗೂ ಬಂದಿವೆ. ಆದರೆ ರಾಜ್ಯ ಸರ್ಕಾರ ಆಗ ಏಕೆ ಎಫ್‌ಐಆರ್ ದಾಖಲಿಸಲಿಲ್ಲ. ಪ್ರಜ್ವಲ್ ವಿದೇಶಕ್ಕೆ ಹೋಗುವುದನ್ನು ರಾಜ್ಯ ಸರ್ಕಾರ ಯಾಕೆ ತಡೆಯಲಿಲ್ಲ? ಈ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಯಾಕೆ ಉತ್ತರ ನೀಡುತ್ತಿಲ್ಲ ಎಂದು  ಪ್ರಹ್ಲಾದ್ ಜೋಶಿ ಕಿಡಿಕಾರಿದರು.

Key words: Prahlad Joshi, Prajwal, case, CBI, DK Shivakumar

Tags :
Prahlad Joshi – Prajwal- case-CBI-DK Shivakumar
Next Article