For the best experience, open
https://m.justkannada.in
on your mobile browser.

ಪ್ರಜ್ವಲ್‌ ಪರಾರಿ :  ಕೊನೆಗೂ  SIT ಗೆ ಉತ್ತರ ಸಿಗುವ ಕಾಲ ಸನಿಹವಾದಂತಿದೆ..!

04:53 PM May 23, 2024 IST | mahesh
ಪ್ರಜ್ವಲ್‌ ಪರಾರಿ    ಕೊನೆಗೂ  sit ಗೆ ಉತ್ತರ ಸಿಗುವ ಕಾಲ ಸನಿಹವಾದಂತಿದೆ

ಬೆಂಗಳೂರು, ಮೇ,23, 2024: ಎಸ್ ಐ ಟಿ ತನಿಖೆಗೆ ಪೂರಕವಾಗುವ ಮಹತ್ವದ ಸುಳಿವೊಂದು ಸಿಕ್ಕ ಬಗ್ಗೆ ಈಗ ಸುದ್ದಿಗಳು ಹರಿದಾಡುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫ್ಯಾನ್ಸ್‌ ಪೇಜ್‌, Siddaramaiah - The Right Choice for CM ಪೇಜ್‌ ನಲ್ಲಿರುವ ಬರಹವನ್ನು  ʼ ಮತ್ತೊಮ್ಮೆ ಸಿದ್ದರಾಮಯ್ಯ !!  ʼ ಪೇಸ್‌ ಬುಕ್‌ ಪೇಜ ನಲ್ಲಿ ಶೇರ್‌ ಮಾಡಲಾಗಿದೆ.

ಈ ಸುದ್ದಿಯ ಒಟ್ಟಾರೆ ಮಾಹಿತಿ ಹೀಗಿದೆ..

92ನೇ ಜನ್ಮದಿನದಂದು ದೇವೇಗೌಡರಿಗೆ ವಿದೇಶದಿಂದ ಕರೆಯೊಂದು ಬಂದ ಬಗ್ಗೆ ಎಸ್ ಐ ಟಿಗೆ ಮಾಹಿತಿ ಸಿಕ್ಕಿದೆಯಂತೆ. ಆ ಐ ಎಸ್ ಡಿ ಕರೆ ಯಾರು ಮಾಡಿದ್ದರು, ಯಾರ ನಂಬರ್ ಮೂಲಕ ಬಂದಿತ್ತು , ಆ ಕರೆಯ ಮೂಲಕ ದೇವೇಗೌಡರೊಟ್ಟಿಗೆ ಮಾತಾಡಿದ್ದು ಯಾರು ಎಂಬುದು ಈಗ ಕುತೂಹಲ ಮೂಡಿಸಿದೆ. ಈ ಸುದ್ದಿ ಈಗ ಪರಾರಿಯಾಗಿರುವ ಪ್ರಜ್ವಲ್‌ ಪತ್ತೆಯ ತನಿಖೆ ವೇಗವನ್ನೇ ಬದಲಾಯಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬೆಂಗಳೂರಿನ ಖ್ಯಾತ ಉದ್ಯಮಿ ಹಾಗೂ ಚಿನ್ನದ ವ್ಯಾಪಾರಿಯೂ ಆಗಿರುವ ದೇವೇಗೌಡರ ಕುಟುಂಬದ ಆಪ್ತ ವ್ಯಕ್ತಿಯೊಬ್ಬನ ಸಂಬಂಧಿಯ ವಿದೇಶಿ ಸಂಪರ್ಕ ಸಂಖ್ಯೆಯಿಂದ ಸಂಪರ್ಕಿಸಲಾದ ಆ ದೂರವಾಣಿಯಲ್ಲಿ ದೇವೇಗೌಡರ ಜತೆ ಆಗುಂತಕ ವ್ಯಕ್ತಿ 1.52 ನಿಮಿಷಗಳ ಕಾಲ ಮಾತಾಡಿದ್ದಾರೆ ಎನ್ನುತ್ತಿವೆ ಎಸ್ ಐ ಟಿ ಮೂಲಗಳು.

ಏನೇನು ಮಾತಾಡಿದ್ದಾರೆ ಅನ್ನುವುದು ಬೇರೆ ಸಂಗತಿ. ತಮ್ಮ ತಾತನ ಜನ್ಮದಿನಕ್ಕೆ ಪ್ರಜ್ವಲ್ ಶುಭಾಶಯ ಕೋರಿರಬಹುದು ಅಥವಾ ಈ ಕೇಸಿನ ಬಗ್ಗೆ, ತಮ್ಮ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿರಬಹುದು. ತನಿಖೆಯ ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ತಿಳಿಯಬಹುದು. ಆದರೆ ವಿಷಯ ಅದಲ್ಲ. ಪ್ರಮುಖ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ತಮ್ಮ ಮೊಮ್ಮಗ ಎಲ್ಲಿದ್ದಾನೆ ಎಂಬ ಮಾಹಿತಿ ದೇವೇಗೌಡರನ್ನೂ ಒಳಗೊಂಡಂತೆ ಅವರ ಕುಟುಂಬದ ಪ್ರತಿಯೊಬ್ಬರಿಗೂ ತಿಳಿದಿದೆ ಅನ್ನೋದು ಇದರಿಂದ ಖಾತ್ರಿಯಾಗುತ್ತೆ. ಆಪಾದಿತನೊಬ್ಬನನ್ನು ಮುಚ್ಚಿಡುತ್ತಿರುವ ಅಪರಾಧದಲ್ಲಿ ಈ ಕುಟುಂಬ ಭಾಗಿಯಾಗಿರುವುದು ಸತ್ಯವಾದಂತಾಗುತ್ತೆ.

ಒಂದು ಅಪರಾಧದ ತನಿಖೆಯ ದಿಕ್ಕನ್ನೇ ಡಿ-ರೇಲ್ ಮಾಡುವ, ಅಪರಾಧಿಯನ್ನೇ ನಿಗೂಢವಾಗಿ ಬಚ್ಚಿಟ್ಟು ರಕ್ಷಿಸುವ, ತನಿಖಾ ಸಂಸ್ಥೆಯನ್ನೇ ಅವಮಾನಿಸುವ, ಅಪರಾಧ ಪ್ರಕರಣಕ್ಕೆ ರಾಜಕೀಯ ಲೇಪ ಬಳಿಯುತ್ತಿರುವ, ಕುಟುಂಬದ ಕುಡಿಯ ರಕ್ಷಣೆಗೋಸ್ಕರ ಮಹಿಳಾ ಸಂತ್ರಸ್ತೆಯರಿಗೆ, ಇಡೀ  ಸ್ತ್ರೀ ಕುಲಕ್ಕೇ ದ್ರೋಹಗೈಯುತ್ತಿರುವ ಆ ಕುಟುಂಬಕ್ಕೆ `ಹುತಾತ್ಮ’ ಪಟ್ಟ ಕಟ್ಟಲು ಯತ್ನಿಸುತ್ತಿರುವವರು ಈ ನೆಲದ ಕಾನೂನಿಗಷ್ಟೇ ದ್ರೋಹ ಎಸಗುತ್ತಿಲ್ಲ; ತಾವು ಹುಟ್ಟಿಬಂದ ತಾಯಿಗರ್ಭಕ್ಕೂ ಅಪಮಾನಗೈಯುತ್ತಿದ್ದಾರೆ.

key words:  Prajwal escapes, the time has finally come, for SIT to get an answer

summary: 

Now the news is spreading that an important clue has been found which will complement the SIT investigation.

Chief Minister Siddaramaiah's fan page, Siddaramaiah - The Right Choice for CM wrote on the page ʼ Siddaramaiah again!! Shared on facebook page.

It seems that the SIT got information about a call from abroad to Devegowda on his 92nd birthday. Who made that ISD call, through whose number did it come, and who spoke to Devegowda through that call is now curious. It is said that this news is likely to change the pace of the investigation into the escape of Prajwal.

Tags :

.