ಮೇ 31ಕ್ಕೆ ಪ್ರಜ್ವಲ್ MP ಸ್ಥಾನ ಅಂತ್ಯ: ಹೀಗಾಗಿ ವಾಪಸ್ ಬರುವುದಾಗಿ ಹೇಳಿಕೆ-ಗೃಹ ಸಚಿವ ಡಾ.ಜಿ.ಪರಮೇಶ್ವರ್.
ಬೆಂಗಳೂರು,ಮೇ,28,2024 (www.justkannada.in): ಮೇ 31ಕ್ಕೆ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅಂತ್ಯವಾಗುತ್ತದೆ. ಅಂತ್ಯವಾದರೇ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದಾಗುತ್ತದೆ. ಅದ್ದರಿಂದ ವಾಪಸ್ ಬರುವುದಾಗಿ ವಿಡಿಯೋ ಮೂಲಕ ಹೇಳಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಿನ್ನೆಯೇ ನಾನು ಪ್ರಜ್ವಲ್ ಹೇಳಿಕೆ ವಿಡಿಯೋ ಗಮನಿಸಿದ್ದೇನೆ. ಎಸ್ ಐಟಿ ಎಲ್ಲಾ ಪ್ರಯತ್ನ ಮಾಡುತ್ತಿದೆ. ವಾರೆಂಟ್ ಮೂಲಕ ಗೃಹಸಚಿವಾಲಯಕ್ಕೆ ತಿಳಿಸಿದ್ದೇವೆ. ಬ್ಲೂಕಾರ್ನರ್ ನೋಟಿಸ್ ಮೂಲಕ ತನಿಖೆ ಆಗುತ್ತಿತ್ತು. ಈಗ ವಾಪಸ್ ಬರುತ್ತೇನೆಂದು ವಿಡಿಯೋ ಮೂಲಕ ತಿಳಿಸಿದ್ದಾರೆ. ಕಾನೂನು ಮೂಲಕ ತಪ್ಪಿಸಿಕೊಳ್ಳಲು ಆಗಲ್ಲ ಮೇ 31 ರಂದು ಪ್ರಜ್ವಲ್ ಸಂಸದ ಸ್ಥಾನ ಅಂತ್ಯವಾಗುತ್ತೆ ಅಂತ್ಯವಾದರೆ ರಾಜತಾಂತ್ರಿಕ ಪಾಸ್ ಪೋರ್ಟ್ ಮುಗಿಯುತ್ತೆ. ಹೀಗಾಗಿ ಇದೆಲ್ಲಾ ತಿಳಿದು ಮರಳಿ ಬರುವುದಕ್ಕೆ ತೀರ್ಮಾನ ಮಾಡಿದ್ದಾರೆ. ವಿಡಿಯೋದಲ್ಲಿ ಷಡ್ಯಂತ್ರ ಇದೆ ಎಂಬ ಆರೋಪ ವಿಚಾರ ಎಸ್ ಐಟಿ ಅಧಿಕಾರಿಗಳು ಇದರ ಬಗ್ಗೆ ಗಮನಿಸುತ್ತಾರೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ ತೀರ್ಮಾನ ಮಾಡುತ್ತದೆ. ಡಿಕೆ ಶಿವಕುಮಾರ್ ಸಮರ್ಥರಿದ್ದಾರೆ. ಡಿಕೆ ಶಿವಕುಮಾರ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
Key words: Prajwal, MP, seat, ends, Dr. G. Parameshwar