25 ಸಾವಿರ ಪೆನ್ ಡ್ರೈವ್ ಹಂಚಿಕೆ: ಕಾರ್ತಿಕ್ ಗೌಡ, ನವೀನ್ ಗೌಡ ವಿರುದ್ದ ಕ್ರಮ ಯಾಕಿಲ್ಲ..? ಆಡಿಯೋ ಬಿಡುಗಡೆ ಮಾಡಿ ಹೆಚ್.ಡಿಕೆ ಆಕ್ರೋಶ.
ಬೆಂಗಳೂರು,ಮೇ,7,2024 (www.justkannada.in): ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 21 ರಂದು ಪೆನ್ ಡ್ರೈವ್ ಹಂಚಿದ್ದಾರೆ. ಚುನಾವಣೆ ಗೆ 2 ದಿನ ಮುಂಚಿತವಾಗಿ ಕೃತ್ಯ ನಡೆದಿದೆ. 25 ಸಾವಿರ ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ. ಪೆನ್ ಡ್ರೈವ್ ಹಂಚಿಕೆಗೆ ಡಿಸಿ ಹಾಗೂ ಪೊಲೀಸರು ಸಹಕಾರ ಕೊಟ್ಟಿದ್ದಾರೆ. ಹಾಸನದಲ್ಲಿ ಮಾತ್ರವಲ್ಲ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರದಲ್ಲೂ ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವೈರಲ್ ವಿಡಿಯೋ ಬಗ್ಗೆ ನವೀನ್ ಗೌಡ ಮತ್ತು ಆತನ ಸ್ನೇಹಿತರು ಮಾತನಾಡಿರುವ ಆಡಿಯೋವನ್ನ ಮತ್ತು ನವೀನ್ ಗೌಡ ಕಾಂಗ್ರೆಸ್ ನಾಯಕರ ಜೊತೆಗಿದ್ದ ಫೋಟೊವನ್ನು ಹೆಚ್.ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದರು.
ಪ್ರಕರಣದಿಂದ ನನಗೆ ತುಂಬಾ ನೋವಾಗಿದೆ. ಇದರಲ್ಲಿ ಯಾವುದೇ ರಾಜೀ ಇಲ್ಲ. 25 ಸಾವಿರ ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ. ಹಾಸನ, ಬೆಂಗಳೂರು, ಗ್ರಾಮಾಂತರ, ಮಂಡ್ಯದಲ್ಲಿ ಹಂಚಿಕೆ ಮಾಡಲಾಗಿದೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ರೂ ಕಠಿಣ ಕ್ರಮ ಆಗಲಿ ಎಂದರು.
ಪೆನ್ ಡ್ರೈವ್ ಹಂಚಿದವರಿಗೆ ಕೋಟಿ ಕೋಟಿ ಹಣ ನೀಡಲಾಗಿದೆ. ನವೀನ್ ಗೌಡ, ಕಾರ್ತಿಕ್ ಗೌಡ ವಿರುದ್ದ ದೂರು ನೀಡಿದರೂ ಕ್ರಮ ಯಾಕೆ ಕೈಗೊಂಡಿಲ್ಲ. ಪೆನ್ ಡ್ರೈವ್ ಸೂತ್ರದಾರಿ ಕಾರ್ತಿಕ್ ಗೌಡ ಎಲ್ಲಿದ್ದಾನೆ ಕೇವಲ ರೇವಣ್ಣ, ಪ್ರಜ್ವಲ್ ರೇವಣ್ಣ ಮಾತ್ರ ತನಿಖೆ ಮಾಡುತ್ತೀರಾ..? ಕಾರ್ತಿಕ್ ಗೌಡನನ್ನ ಿದುವರೆಗೂ ಅರೆಸ್ಟ್ ಮಾಡಲಿಲ್ಲ. ಎಲ್ಲಿದ್ದಾನೆ ಕಾರ್ತಿಕ್ ಗೌಡ...? ಎಂದು ಪ್ರಶ್ನಿಸಿದರು
ಕಿಡ್ನ್ಯಾಪ್ ಆದ ಮಹಿಳೆಯನ್ನ ನೀವು ಎಲ್ಲಿಂದ ಕರೆತಂದ್ರಿ..? ಒಂದುವರೆ ದಿನ ಆದರೂ ಆ ಮಹಿಳೆ ಹೇಳಿಕೆ ಕೊಡಲಿಲ್ಲವಾ..? ಆ ತೋಟದ ಮನೆಯನ್ನೂ ಮಹಜರು ಮಾಡಿಲ್ಲ. ಎಸ್ಐಟಿ ಇದು ಒಂದು ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್. ಮತ್ತೊಂದು ಡಿಕೆ ಶಿವಕುಮಾರ್ ಇನ್ವೆಷ್ಟಿಗೇಷನ್ ಟೀಮ್. ಸರ್ಕಾರಕ್ಕೆ ಸಂತ್ರಸ್ತೆಯರನ್ನ ರಕ್ಷಣೆ ಮಾಡುವುದು ಬೇಕಾಗಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
Key words: Prajwal, pen drive, HD kumaraswamy