For the best experience, open
https://m.justkannada.in
on your mobile browser.

ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ: ತಪ್ಪು ಮಾಡಿದ್ದವರಿಗೆ ಶಿಕ್ಷೆ ಆಗುತ್ತೆ ಎಂದ ಶಾಸಕ ಜಿಟಿಡಿ

01:57 PM May 16, 2024 IST | prashanth
ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ  ತಪ್ಪು ಮಾಡಿದ್ದವರಿಗೆ ಶಿಕ್ಷೆ ಆಗುತ್ತೆ ಎಂದ ಶಾಸಕ ಜಿಟಿಡಿ

ಮೈಸೂರು, ಮೇ 16, 2024 (www.justkannada.in): ಪ್ರಜ್ವಲ್ ರೇವಣ್ಣ ತಲೆ ಮರೆಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಶಾಸಕ ಜಿಟಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬ ಮಾಹಿತಿ ನಮಗೆ ಗೊತ್ತಿಲ್ಲ. ಕುಟುಂಬಸ್ಥರ ಸಂಪರ್ಕಕ್ಕೂ ಸಿಕ್ಕಿಲ್ಲ. ರಾಜ್ಯ ಸರ್ಕಾರವೇ ಬ್ಲೂ ಕಾರ್ನರ್ ನೋಟಿಸ್ ನೀಡಿದೆ. ಎಸ್ ಐಟಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಸಿಎಂ ಈಗಾಗಲೇ ಹೇಳಿದ್ದಾರೆ ಈ ಕೇಸ್ ಸಿಬಿಐ ವಹಿಸಲ್ಲ ಎಂದಿದ್ದಾರೆ. ನಾವು ಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣ ಬಂಧಿಸಿದ್ದ ವಿರುದ್ಧ ಪ್ರತಿಭಟನೆ ಮಾಡಿದ್ದೆವು. ಪ್ರಜ್ವಲ್ ರೇವಣ್ಣ ಪರವಾಗಿ ನಾವು ಪ್ರತಿಭಟನೆ ಮಾಡಿಲ್ಲ ಎಂದು ಜಿಟಿಡಿ ಹೇಳಿದ್ದಾರೆ.

ತಮಿಳುನಾಡು ಸೇರಿದಂತೆ ಇತರೆ ಕಡೆ ಪೆನ್ ಡ್ರೈವ್ ತಯಾರಿಸಿದ್ದರು ಎಂದು ಸಿಬಿಸಿ ಗೆ ಈ ಕೇಸ್ ಕೊಡಿ ಅಂತ ಹೇಳಿದ್ವಿ. ಎಸ್ಐಟಿ ಅಧಿಕಾರಿಗಳು ತನಿಖೆ ಮಾಡಿ ಸತ್ಯಾಸತ್ಯತೆ ಬಯಲಿಗೆ ತರುತ್ತಾರೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗುತ್ತೆ ಎಂದು ಜಿಟಿ ದೇವೇಗೌಡ ಹೇಳಿದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಟಿಕೆಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಜಿಟಿ ದೇವೇಗೌಡ, ಶ್ರೀಕಂಠೇಗೌಡ ಜನತಾ ಪಕ್ಷದ ಕಟ್ಟಾಳು. ದೇವೇಗೌಡರು ಕುಮಾರಸ್ವಾಮಿಯ ಅಪ್ಪಟ ಶಿಷ್ಯ. ಶ್ರೀಕಂಠೇಗೌಡರ  ಮುಂದಾಳತ್ವದಲ್ಲಿಯೆ ಈ ಚುನಾವಣೆ ನಡೆಯತ್ತೆ. ಯಾರು ಅನುಮಾನ ಪಡುವ ಅಗತ್ಯವಿಲ್ಲ. ವಿಜಯೇಂದ್ರ ಅವರು ಬರಬೇಕಿತ್ತು. ಅನಿವಾರ್ಯ ಕಾರಣದಿಂದ ಬಂದಿಲ್ಲ. ರಾಘವೇಂದ್ರ, ಆರ್.ಅಶೋಕ್ ಬರ್ತಾರೆ. ಸಣ್ಣ ವ್ಯತ್ಯಾಸದಿಂದ ನಿಂಗರಾಜ್ ಗೌಡಗೆ ಟಿಕೆಟ್ ಘೋಷಣೆ ಆಗಿತ್ತು ಅಷ್ಟೇ. ಈಗ ವಿವೇಕನಂದ ಪರ ಎಲ್ಲರೂ ಕೆಲಸ ಮಾಡ್ತಾರೆ. ಶ್ರೀಕಂಠೇಗೌಡರೇ ಚುನಾವಣೆ ಜವಾಬ್ದಾರಿ ತೆಗೆದುಕೊಂಡು ಚುನಾವಣೆಯಲ್ಲಿ ವಿವೇಕಾನಂದರನ್ನು ಗೆಲ್ಲಿಸುತ್ತಾರೆ ಎಂದು ಜಿಟಿಡಿ ಹೇಳಿದ್ದಾರೆ.

Tags :

.