For the best experience, open
https://m.justkannada.in
on your mobile browser.

ಮ್ಯೂನಿಕ್ ನಿಂದ ಬೆಂಗಳೂರಿನತ್ತ ಹೊರಟ ಸಂಸದ ಪ್ರಜ್ವಲ್ ರೇವಣ್ಣ.

04:43 PM May 30, 2024 IST | prashanth
ಮ್ಯೂನಿಕ್ ನಿಂದ ಬೆಂಗಳೂರಿನತ್ತ ಹೊರಟ ಸಂಸದ ಪ್ರಜ್ವಲ್ ರೇವಣ್ಣ

ಬೆಂಗಳೂರು, ಮೇ 30,2024 (www.justkannada.in):  ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬೆನ್ನಲ್ಲೆ ವಿದೇಶಕ್ಕೆ ಹಾರಿ ಇಷ್ಟು ದಿನ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಕೊನೆಗೂ ಬೆಂಗಳೂರಿನತ್ತ  ಹೊರಟಿದ್ದಾರೆ.

ಪ್ರಜ್ವಲ್ ರೇವಣ್ಣ ವಿಮಾನದಲ್ಲಿ ಮ್ಯೂನಿಕ್​ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ಪ್ರಜ್ವಲ್ ಆಗಮಿಸುತ್ತಿರುವ LH764 ವಿಮಾನ ಮ್ಯೂನಿಕ್‌ ಏರ್‌ಪೋರ್ಟ್‌ನಿಂದ ಟೇಕಾಫ್ ಆಗಿದೆ. ಈಗಾಗಲೇ ಲಗೇಜ್ ಚೆಕ್ ಇನ್ ಮಾಡಿಸಿರುವ ಪ್ರಜ್ವಲ್​, ಬ್ಯುಸಿನೆಸ್​​ ಕ್ಲಾಸ್​​ ಪ್ರಯಾಣಿಕರ ಜೊತೆ ಕುಳಿತುಕೊಂಡಿದ್ದಾರೆ. ಪ್ರಜ್ವಲ್‌ ರೇವಣ್ಣ 4 ಬ್ಯಾಗ್ ತಂದಿರುವ ಮಾಹಿತಿ ಇದೆ. ಕೆಂಪೇಗೌಡ ಏರ್‌ಪೋರ್ಟ್‌ಗೆ ಮಧ್ಯರಾತ್ರಿ ಆಗಮಿಸಲಿದ್ದಾರೆ.

ಇತ್ತೀಚೆಗೆ ಮೇ 31 ರಂದು  ಬೆಂಗಳೂರಿಗೆ ವಾಪಸ್ ಬಂದು ಎಸ್​ಐಟಿ ಮುಂದೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿಕೆ ಬಿಡುಗಡೆ ಮಾಡಿದ್ದರು. ಇನ್ನು ಪ್ರಜ್ವಲ್ ರೇವಣ್ಣ ಏರ್ ಪೋರ್ಟ್ ಗೆ ಆಗಮಿಸುತ್ತಿದ್ದಂತೆ ಬಂಧನಕ್ಕೆ ಎಸ್ ಐಟಿ ಸಜ್ಜಾಗಿದೆ.

Key words: Prajwal Revanna, Bangalore, from, Munich

Tags :

.