HomeBreaking NewsLatest NewsPoliticsSportsCrimeCinema

ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಕೇಸ್: SIT ಸಹಾಯವಾಣಿಗೆ 30ಕ್ಕೂ ಹೆಚ್ಚು ಕರೆ

11:09 AM May 24, 2024 IST | prashanth

ಹಾಸನ, ಮೇ 24,2024 (www.justkannada.in): ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ  ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರು ದೂರು ನೀಡಲು ಎಸ್​ಐಟಿ (SIT) ಆರಂಭಿಸಿದ್ದ ಸಹಾಯವಾಣಿಗೆ ಈವರೆಗೆ 30ಕ್ಕೂ ಹೆಚ್ಚು ಕರೆಗಳು ಬಂದಿವೆ ಎಂಬ ಮಾಹಿತಿ ತಿಳಿದು ಬಂದಿದೆ.

ಆದರೆ ಸಹಾಯವಾಣಿಗೆ ಕರೆ ಮಾಡಿರುವ ಸಂತ್ರಸ್ತ ಮಹಿಳೆಯರು ಇದುವರೆಗೂ ದೂರು ನೀಡಿಲ್ಲ. ಹೀಗಾಗಿ ಹೆಲ್ಪ್‌ಲೈನ್ ಸಂಪರ್ಕಿಸಿ ಮಾಹಿತಿ ನೀಡುವಂತೆ ಮತ್ತೊಮ್ಮೆ ಎಸ್​ಐಟಿ ಮನವಿ ಮಾಡಿದೆ ಎನ್ನಲಾಗಿದೆ.

6360938947 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ದೂರು ನೀಡಲು ಎಸ್​​​​ಐಟಿ ಮನವಿ ಮಾಡಿದೆ. ದೂರು ನೀಡಿದರೆ ಮಾಹಿತಿ ಸಂಗ್ರಹಿಸಲು ಸಿದ್ದರಿದ್ದೇವೆ. ಗುರುತು, ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎಸ್​ಐಟಿ ಭರವಸೆ ನೀಡಿದೆ.

Key words: Prajwal Revanna, case, 30 calls, SIT, helpline

Tags :
Prajwal Revanna – case-30 calls - SIT -helpline
Next Article