HomeBreaking NewsLatest NewsPoliticsSportsCrimeCinema

ಎಸ್ ಐಟಿ ಮೇಲೆ ನಂಬಿಕೆ: ಪ್ರಜ್ವಲ್ ರೇವಣ್ಣ ಪ್ರಕರಣ ಸಿಬಿಐಗೆ ಕೊಡಲ್ಲ- ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ.

12:12 PM May 10, 2024 IST | prashanth

ಮೈಸೂರು,ಮೇ,10,2024 (www.justkannada.in):  ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನ ಸಿಬಿಐಗೆ ಕೊಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುವಂತೆ ಜೆಡಿಎಸ್ ಬಿಜೆಪಿ ನಾಯಕರಿಂದ ಆಗ್ರಹ ಕೇಳಿಬಂದ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಸ್ ಐಟಿ ಬಿಟ್ಟು ಇನ್ಯಾರ ಮೇಲೆ ನಂಬಿಕೆ ಇಡ್ತೀರಿ. ಸಿಬಿಐಗೆ ಕೊಟ್ಟ ಕೇಸ್ ನಲ್ಲಿ ಯಾರಿಗೆ ಶಿಕ್ಷೆಯಾಗಿದೆ ಹೇಳಿ.  ಮೊದಲು ಬಿಜೆಪಿ ಸಿಬಿಐ ಸಂಸ್ಥೆಯನ್ನ ಟೀಕಿಸಿತ್ತು ಈಗಾ ಏಕಾಏಕಿ ಸಿಬಿಐ ಮೇಳೆ ಪ್ರೀತಿ ಬಂತ. ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಪಾತ್ರವೂ ಇಲ್ಲ ನನ್ನ ಪಾತ್ರವೂ ಇಲ್ಲ . ಪ್ರಜ್ವಲ್ ಕೇಸ್ ಸಿಬಿಐಗೆ ಕೊಡಲ್ಲ.  ಎಸ್ ಐಟಿ ನಮಗೆ ಮೇಲೆ ನಂಬಿಕೆ ಇದೆ ಎಂದರು.

ಕಿಡ್ನಾಪ್ ಕೇಸ್ ನಲ್ಲಿ ರಾಜಕೀಯ ಎಲ್ಲಿಂದ ಬಂತು. ಅಪರಾಧ ಇಲ್ಲ ಅಂದ್ರೆ ಹೆಚ್ ಡಿ ರೇವಣ್ಣ  ಜಾಮೀನು ಅರ್ಜಿ ಯಾಕೆ ತಿರಸ್ಕಾರ ಆಯಿತು. ರೇವಣ್ಣ ನಿರೀಕ್ಷಣಾ ಜಾಮೀನಿಗೆ ಯಾಕೆ ಅರ್ಜಿ ಸಲ್ಲಿಸಿದ್ದರು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

Key words: Prajwal Revanna-case-CBI- CM -Siddaramaiah

Tags :
caseCBICMprajwal revannaSiddaramaiah
Next Article