HomeBreaking NewsLatest NewsPoliticsSportsCrimeCinema

ಹೆಚ್ ಡಿಕೆಯಿಂದ ದಿಕ್ಕು ತಪ್ಪಿಸುವ ಕೆಲಸ: ಕಾಂಗ್ರೆಸ್ ನಾಯಕರ ವಿರುದ್ಧ ಹಗುರ ಹೇಳಿಕೆ ಸಲ್ಲದು: ಜಿ ಶ್ರೀನಾಥ್ ಬಾಬು ಕಿಡಿ.

12:12 PM May 09, 2024 IST | prashanth

ಮೈಸೂರು,ಮೇ,9,2024 (www.justkannada.in):  ‘ಸಂಸದ ಪ್ರಜ್ವಲ್‌ ರೇವಣ್ಣ ಮೇಲಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ಎಚ್.ಡಿ. ಕುಮಾರಸ್ವಾಮಿ ಅವರು  ಡಿ.ಕೆ.ಶಿವಕುಮಾರ್ ವಿರುದ್ಧ ಸಲ್ಲದ ಆರೋಪ ಮಾಡಿ ಪ್ರಕರಣದ ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ  ಜಿ ಶ್ರೀನಾಥ್ ಬಾಬು ಆರೋಪಿಸಿದರು.

‘ಚುನಾವಣೆ ಪೂರ್ವದಲ್ಲಿ ‘ಪ್ರಜ್ವಲ್ ರೇವಣ್ಣ ನನ್ನ ಮಗನಿದ್ದಂತೆ’ ಎಂದಿದ್ದರು. ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಕೂಡಲೇ ನಮ್ಮ ಹಾಗೂ ಎಚ್.ಡಿ. ರೇವಣ್ಣ ಕುಟುಂಬ ಬೇರೆ ಬೇರೆ ಎನ್ನುತ್ತಿದ್ದಾರೆ. ಮಾಜಿ ಪ್ರಧಾನಿಯೊಬ್ಬರ ಕುಟುಂಬದ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲಿ ಎಂದು ಹೇಳದೆ, ಡಿ.ಕೆ.ಶಿವಕುಮಾರ್ ಇದರ ರೂವಾರಿ ಎಂದು ಸುಳ್ಳು ಅಪಾದನೆ ಮಾಡಿ ರಾಜೀನಾಮೆ ನೀಡಲಿ ಎಂದು ಒತ್ತಾಯಿಸುವುದು ಸರಿಯೇ’ ಎಂದು  ಪ್ರಶ್ನಿಸಿದರು.

ನೂರಾರು ಅಮಾಯಕ ಮಹಿಳೆಯರ ಅಶ್ಲೀಲ ಚಿತ್ರಗಳ ವಿಡಿಯೊಗಳನ್ನು ಪೆನ್‌ ಡ್ರೈವ್‌ ಸಂಗ್ರಹಿಸಿರುವುದು ಬಿಜೆಪಿ ಮುಖಂಡ ದೇವರಾಜೇಗೌಡ.  ಆತನನ್ನು ಬಂಧಿಸಿ ವಿಚಾರಣೆ ನಡೆಸಿದರೆ ಸತ್ಯ ಬಯಲಿಗೆ ಬರಲಿದೆ. ಕುಮಾರಸ್ವಾಮಿಗೆ ಮಹಿಳೆಯರ ಪರ ಕನಿಕರ ಇದ್ದಲ್ಲಿ ಪ್ರಜ್ವಲ್ ಎಲ್ಲಿದ್ದಾನೆ ಎಂಬ ಬಗ್ಗೆ ಎಸ್‌ ಐಟಿ ತಂಡಕ್ಕೆ ಮಾಹಿತಿ ನೀಡಿ ವಿಚಾರಣೆಗೆ ಒತ್ತಾಯಿಸಲಿ. ಹೀಗೆ ಮುಂದುವರಿದರೆ ಅವರ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಹಿಳೆಯ ಮೇಲೆ ಅತ್ಯಾಚಾರ ಆರೋಪವಿರುವ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಅಮಾಯಕ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗಬೇಕು. ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

Key words: Prajwal Revanna, case, HDK, congress

Tags :
Prajwal Revanna-case-HD Kumaraswamy-congress leader
Next Article