ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕೇಂದ್ರ ಸರ್ಕಾರದಿಂದ ಅಸಹಕಾರ-ಸಚಿವ ಶಿವರಾಜ ತಂಗಡಗಿ ಆರೋಪ.
ಕೊಪ್ಪಳ,ಮೇ,17,2024 (www.justkannada.in): ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕೇಂದ್ರ ಸರ್ಕಾರ ಅಸಹಕಾರ ತೋರುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಆರೋಪ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತು ಎಸ್ ಐಟಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣರನ್ನು ವಿದೇಶದಿಂದ ಕರೆ ತರಲು ಕೇಂದ್ರ ಸರ್ಕಾರ ಸಹಕಾರ ನೀಡಬೇಕಾಗಿದೆ. ಆದರೆ ಅವರಿಂದ ಸಹಕಾರ ಸಿಗುತ್ತಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಶಿವರಾಜ್ ತಂಗಡಗಿ, ಬಿಜೆಪಿ ಅವಧಿಯಲ್ಲಿ ಯಾವುದೇ ಕೊಲೆ ರೇಪ್ ಆಗಿಲ್ವಾ..? ದುಷ್ಟರು ಎಲ್ಲಾ ಸಮಯದಲ್ಲೂ ಇರ್ತಾರೆ ಹಂತಕರನ್ನ ಕಟ್ಟಿ ಹಾಕುಲ ಕೆಲಸ ಮಾಡುತ್ತೇವೆ ಎಂದರು.
ಅಂಜಲಿ ಹತ್ಯೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಿವರಾಜ್ ತಂಗಡಗಿ, ಇಂತಹ ಘಟನೆಗಳು ನಡೆಯಬಾರದು. ಇಂತಹ ಘಟನೆಗಳನ್ನು ಖಂಡಿಸುತ್ತೇವೆ. ಈಗಾಗಲೇ ಹುಬ್ಬಳ್ಳಿಯ ಎರಡು ಘಟನೆಗಳ ಬಗ್ಗೆ ಸಭೆ ನಡೆದಿದೆ. ದುಷ್ಟರನ್ನು ಮಟ್ಟಹಾಕಲು ಸರ್ಕಾರ ಚರ್ಚೆ ನಡೆಸಿದೆ. ಇಂತಹ ಕೃತ್ಯಗಳನ್ನು ನಾವಾಗಲಿ, ಸರಕಾರವಾಗಲಿ ಸಹಿಸಿಕೊಳ್ಳುವುದಿಲ್ಲ ಎಂದರು.
Key words: Prajwal Revanna, Minister, Shivaraj thangadagi