ಪ್ರಜ್ವಲ್ ರೇವಣ್ಣ ಎನ್ ಡಿಎ ಅಭ್ಯರ್ಥಿ: ಇದಕ್ಕೆ ಮೋದಿ ಕೂಡ ಉತ್ತರಿಸಬೇಕು-ಡಿ.ಕೆ ಸುರೇಶ್.
10:25 AM Apr 30, 2024 IST
|
prashanth
ಬೆಂಗಳೂರು,ಏಪ್ರಿಲ್,30,2024 (www.justkannada.in): ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಸಂಸದ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದು ಪ್ರಕರಣ ಸಂಬಂಧ ಪ್ರಧಾನಿ ಮೋದಿ ಕೂಡ ಉತ್ತರಿಸಬೇಕು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್, ಪ್ರಜ್ವಲ್ ರೇವಣ್ಣ ಎನ್ ಡಿಎ ಅಭ್ಯರ್ಥಿ. ಹೀಗಾಗಿ ಪ್ರಧಾನಿ ಮೋದಿ ಕೂಡ ಉತ್ತರಿಸಬೇಕು. ಹೆಚ್ ಡಿಡಿ ಕುಟುಂಬದಿಂದ ಅನ್ಯಾಯವಾಗಿದೆ. ಇದು ಇಡೀ ದೇಶ, ಕರ್ನಾಟಕ ತಲೆ ತಗ್ಗಿಸುವ ಕೆಲಸ ಆಗಿದೆ ಎಂದು ಕಿಡಿಕಾರಿದರು.
ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳುತ್ತಾರೆ. ಬೇಕಾದಾಗ ಒಂದು ಬೇಡದೆ ಇದ್ದಾಗ ಇನ್ನೊಂದು ಹೇಳೋದು ಸರಿಯಲ್ಲ ಎಂದು ಡಿ.ಕೆ ಸುರೇಶ್ ಕುಟುಕಿದರು.
Key words: Prajwal Revanna-NDA -candidate: Modi - answer - DK Suresh.
Next Article