ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್: ಎಸ್ ಐಟಿಯಿಂದ ಇಬ್ಬರ ಬಂಧನ.
03:59 PM May 28, 2024 IST
|
prashanth
Tags :
ಬೆಂಗಳೂರು,ಮೇ,28,2024 (www.justkannada.in): ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಹಂಚಿಕೆ ಮಾಡಿದ ಆರೋಪದ ಮೇಲೆ ಇಬ್ಬರನ್ನ ಎಸ್ ಐಟಿ ಪೊಲೀಸರು ಬಂಧಿಸಿದ್ದಾರೆ.
ನವೀನ್ ಗೌಡ , ಚೇತನ್ ಗೌಡ ಬಂಧಿತರು. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯಿದ್ದ ಕಾರಣ ಹೈಕೋರ್ಟ್ ಗೆ ಬಂದಿದ್ದ ವೇಳೆ ಈ ಇಬ್ಬರನ್ನು ಎಸ್ ಐ ಟಿ ಬಂಧಿಸಿದೆ.
ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಏ.23 ರಂದು ಹಾಸನದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಡಿಯೋ ವೈರಲ್ ಮಾಡಿದ್ದವರನ್ನು ಬಂಧಿಸದಕ್ಕೆ ಎಚ್ಡಿ ಕುಮಾರಸ್ವಾಮಿ ಅವರು ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ದೂರು ದಾಖಲಾದ ಬರೋಬ್ಬರಿ ಒಂದು ತಿಂಗಳು ಬಳಿಕ ಆರೋಪಿಗಳ ಬಂಧನವಾಗಿದೆ.
Key words: Prajwal Revanna, pen drive, case, arrests, two
Next Article