For the best experience, open
https://m.justkannada.in
on your mobile browser.

ಇಂದು ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಸ್: ಹಾಸನದಲ್ಲಿಂದು ಬೃಹತ್ ಪ್ರತಿಭಟನೆ.

10:28 AM May 30, 2024 IST | prashanth
ಇಂದು ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಸ್  ಹಾಸನದಲ್ಲಿಂದು ಬೃಹತ್ ಪ್ರತಿಭಟನೆ

ಬೆಂಗಳೂರು,ಮೇ,30,2024 (www.justkannada.in): ಲೈಂಗಿಕ ದೌರ್ಜನ್ಯ ಆರೋಪದ ಬೆನ್ನಲ್ಲೆ ವಿದೇಶಕ್ಕೆ ಹಾರಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು ವಾಪಸ್ ಆಗುತ್ತಿದ್ದಾರೆ.

ಲೈಂಗಿಕ ದೌರ್ಜನ್ಯದ ಆರೋಪಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಇಂದು ಮಧ್ಯರಾತ್ರಿ ಜರ್ಮನಿಯಿಂದ ಬೆಂಗಳೂರಿಗೆ ಬರುವ ವಿಮಾನದಲ್ಲಿ ಟಿಕೆಟ್ ರಿಸರ್ವ್ ಮಾಡಿದ್ದು, ಬರೋಬ್ಬರಿ 35 ದಿನಗಳ ಬಳಿಕ ರಾಜ್ಯಕ್ಕೆ ಹಿಂದಿರುಗುತ್ತಿದ್ದಾರೆ.

ಇನ್ನು ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲೆ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್ಐಟಿ ಸಜ್ಜಾಗಿದೆ. ತಡರಾತ್ರಿ 12.30 ಕ್ಕೆ ಪ್ರಜ್ವಲ್ ರೇವಣ್ಣರನ್ನ ವಶಕ್ಕೆ  ಎಸ್ಐಟಿ  ಪಡೆಯಲು ಮುಂದಾಗಿದೆ. ಈಗಾಗಲೇ ಪ್ರಜ್ವಲ್ ಪರ ವಕೀಲ ಅರುಣ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದ್ದಿ,  ಬಂಧನದಿಂದ ತಪ್ಪಿಸಿಕೊಳ್ಳಲು  ಇದ್ದ ಎಲ್ಲಾ ದ್ವಾರಗಳು ಬಂದ್ ಆಗಿವೆ. ಇಂದು ಮಧ್ಯಾಹ್ನ 3.30 ಕ್ಕೆ ಪ್ರಜ್ವಲ್ ರೇವಣ್ಣ ವಿಮಾನ ಹತ್ತಲಿದ್ದು, ಮಧ್ಯ ರಾತ್ರಿ 12.30 ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ವಿಮಾನದಿಂದ ಇಳಿಯುತ್ತಿದ್ದಂತೆ ಬಂಧನಕ್ಕೆ ಎಸ್ಐಟಿ ಸಜ್ಜಾಗಿದ್ದು ಬಂಧನದ ಬಳಿಕ ತೀವ್ರ ವಿಚಾರಣೆಗೊಳಪಡಿಸಲಿದ್ದಾರೆ.

ಇಂದು ಹಾಸನದಲ್ಲಿ ಸಂತ್ರಸ್ತೆಯರ ಪರ ಬೃಹತ್ ಪ್ರತಿಭಟನೆ.

ಇನ್ನು ಹಾಸನದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ  ವಿವಿಧ ಸಂಘಟನೆಗಳು ಸಂತ್ರಸ್ತೆಯರ ಪರ ಹೋರಾಟಕ್ಕೆ ಮುಂದಾಗಿವೆ. ಸಂತ್ರಸ್ತೆಯರ ಪರ  ನ್ಯಾಯಕ್ಕಾಗಿ ಹಾಸನ ಚಲೋ ನಡೆಯಲಿದೆ.

ದಳಪತಿಗಳ ನೆಲದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಯಲಿದ್ದು ಇಂದು ಹಾಸನದಲ್ಲಿ ಬೃಹತ್ ಪ್ರತಿಭಟನೆ. ನಡೆಯಲಿದೆ.  ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, 10 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆ ಇದೆ.

ಪ್ರತಿಭಟನೆಗೆ 113 ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು ಹಾಸನದ ಹೇಮಾವತಿ ಪ್ರತಿಮೆ ಬಳಿಯಿಂದ ಆರಂಭವಾಗುವ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಹಳೆ ಬಸ್ ನಿಲ್ದಾಣದ ಮೂಲಕ ಪ್ರತಿಭಟನಾ ಮೆರವಣಿಗೆ ಡಿಸಿ ಕಚೇರಿ ತಲುಪಲಿದೆ.  ಪ್ರತಿಭಟನೆಯಲ್ಲಿ ಹಲವು ಪ್ರಗತಿಪರ ಸಂಘಟನೆಗಳ ಮುಖಂಡರು ಸೇರಿದಂತೆ ಸಹಸ್ರಾರು ಜನ ಭಾಗಿಯಾಗಲಿದ್ದಾರೆ.

Key words: Prajwal Revanna, returns, abroad, today

Tags :

.