For the best experience, open
https://m.justkannada.in
on your mobile browser.

ಜೂನ್ 10ರವರೆಗೆ ಪ್ರಜ್ವಲ್ ರೇವಣ್ಣ ಎಸ್ ಐಟಿ ಕಸ್ಟಡಿಗೆ.

04:42 PM Jun 06, 2024 IST | prashanth
ಜೂನ್ 10ರವರೆಗೆ ಪ್ರಜ್ವಲ್ ರೇವಣ್ಣ ಎಸ್ ಐಟಿ ಕಸ್ಟಡಿಗೆ

ಬೆಂಗಳೂರು, ಜೂನ್ 06,2024 (www.justkannada.in):  ಲೈಂಗಿಕ ದೌರ್ಜನ್ಯ  ಪ್ರಕರಣಕ್ಕೆ ಸಂಬಂಧಿಸಿದಂತೆ  ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಎಸ್‌ಐಟಿ ಕಸ್ಟಡಿ  ಅವಧಿಯನ್ನ ವಿಸ್ತರಣೆ ಮಾಡಲಾಗಿದೆ.

ಜೂನ್ 10ರವರೆಗೆ ಪ್ರಜ್ವಲ್ ರೇವಣ್ಣರನ್ನ ಎಸ್ ಐಟಿ ಕಸ್ಟಡಿಗೆ ನೀಡಿ ಬೆಂಗಳೂರಿನ ವಿಶೇಷ ಕೋರ್ಟ್‌ ಆದೇಶಿಸಿದೆ.  ಇಂದು ಕಸ್ಟಡಿ ಅಂತ್ಯವಾದ ಹಿನ್ನೆಲೆ ಎಸ್‌ಐಟಿ ಪೊಲೀಸರು ಪ್ರಜ್ವಲ್ ರೇವಣ್ಣರನ್ನ ಹಾಜರುಪಡಿಸಿದ್ದರು.

ಎಸ್‌ಐಟಿ ಪರವಾಗಿ ವಾದ ಮಂಡಿಸಿದ ಎಸ್‌ಪಿಪಿ ಅಶೋಕ್ ನಾಯಕ್ ಪ್ರಜ್ವಲ್ ರೇವಣ್ಣ ಕಸ್ಟಡಿ ಅವಧಿ ವಿಸ್ತರಣೆಗೆ ಮನವಿ ಮಾಡಿದರು. ಎಸ್‌ಐಟಿ ವಾದವನ್ನು ಪುರಸ್ಕರಿಸಿದ ಕೋರ್ಟ್ ಪ್ರಜ್ವಲ್ ರೇವಣ್ಣ ಎಸ್‌ಐಟಿ ವಶದ ಅವಧಿಯನ್ನು ಜೂನ್ 10ರ ತನಕ ವಿಸ್ತರಣೆ ಮಾಡಿತು.

Key words: Prajwal Revanna,  SIT, custody, June 10.

Tags :

.