For the best experience, open
https://m.justkannada.in
on your mobile browser.

ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಹಿಂದೆ ಹೆಚ್.ಡಿಕೆ ಕೈವಾಡ- ಡಿ.ಕೆ ಸುರೇಶ್.

01:55 PM May 01, 2024 IST | prashanth
ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಹಿಂದೆ ಹೆಚ್ ಡಿಕೆ ಕೈವಾಡ  ಡಿ ಕೆ ಸುರೇಶ್

ಬೆಂಗಳೂರು, ಮೇ, 1, 2024 (www.justkannada.in):  ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬಿಡುಗಡೆ ಹಿಂದೆ ಮಾಜಿ ಸಿಎಂ ಹೆಚ್​. ಡಿ ಕುಮಾರಸ್ವಾಮಿ ಕೈವಾಡ ಇದೆ ಎಂದು ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್  ಅಭ್ಯರ್ಥಿ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ವಿಡಿಯೋ ಬಿಡುಗಡೆ ಹಿಂದೆ ಮೈತ್ರಿ ನಾಯಕರು ಹಾಗೂ ಹೆಚ್​ಡಿ ಕುಮಾರಸ್ವಾಮಿ ಕೈವಾಡ ಇದೆ. ಹೆಣ್ಣು ಮಕ್ಕಳಿಗೆ ಅನ್ಯಾಯ ಆಗಿರುವ ಬಗ್ಗೆ ಗಮನ ಹರಿಸಬೇಕಿದೆ. ಈ ಕೇಸ್​ ಬಗ್ಗೆ ಹಾಸನ ಜಿಲ್ಲೆಯಲ್ಲಿ ಮೊದಲೇ ಗುಸುಗುಸು ಇತ್ತು. ಹಾಗೆಂದು ವೀಡಿಯೋ ನೋಡಿದವರು ಯಾರೂ ಇರಲಿಲ್ಲ. ನ್ಯಾಯಾಲಯದ ತಡೆಯಾಜ್ಞೆ ತಂದಾಗ ಅದು ಖಚಿತ​ ಆಗಿದೆ. ಪೆನ್​ಡ್ರೈವ್ ಬಿಡುಗಡೆಯಾದಾಗ ಬಹಿರಂಗವಾಗಿ ಚರ್ಚೆ ಆಗಿದೆ. ಈ ವಿಡಿಯೋ ಹಿಂದೆ ಹಾಸನ ಜಿಲ್ಲಾ ನಾಯಕರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.

ವಿಡಿಯೋ ಬಿಡುಗಡೆ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಡಿ.ಕೆ ಸುರೇಶ್, ಡಿಕೆ ಶಿವಕುಮಾರ್ ಬಳಿ ವಿಡಿಯೋ ಇದ್ದಿದ್ದರೆ ಚುನಾವಣೆಗೂ ಮುಂಚೆಯೇ ಬಿಡುಗಡೆ ಮಾಡುತ್ತಿದ್ದರು.  ಪ್ರಕರಣಕ್ಕೂ ಡಿ.ಕೆ ಶಿವಕುಮಾರ್ ಗೂ ಯಾವುದೇ ಸಂಬಂಧವಿಲ್ಲ. ಡಿಸಿಎಂ ಡಿಕೆಶಿವಕುಮಾರ್ ಹೆಸರು ಹೇಳದಿದ್ದರೆ ಕುಮಾರಸ್ವಾಮಿ ಕುಟುಂಬಕ್ಕೆ ಊಟ ಸೇರುವುದಿಲ್ಲ. ಬಹಳ ದೊಡ್ಡ ಕುಟುಂಬ ಅಲ್ವಾ ಅವರದ್ದು. ಅವರವರ ಉಳಿವಿಗಾಗಿ ಡಿಕೆಶಿಯವರನ್ನು ಬಳಸಿಕೊಳ್ಳುತ್ತಿದ್ದಾರೆ. ಡಿಕೆಶಿಯನ್ನು ಅನಗತ್ಯವಾಗಿ ಎಳೆದು ತರುತ್ತಿದ್ದಾರೆ ಎಂದು ಕಿಡಿಕಾರಿದರು.

Key words: Prajwal Revanna, video, HDK, DK Suresh

Tags :

.