For the best experience, open
https://m.justkannada.in
on your mobile browser.

CHAMUNDI “POWER” CONTROVERSY: ಅತ್ತ ದಸರಾ ಕಮಿಟಿ ಸಭೆ ; ಇತ್ತ ಪ್ರಮೋದಾದೇವಿ ಒಡೆಯರ್‌ ಪ್ರೆಸ್‌ ಮೀಟ್.

01:09 PM Aug 12, 2024 IST | mahesh
chamundi “power” controversy  ಅತ್ತ ದಸರಾ ಕಮಿಟಿ ಸಭೆ   ಇತ್ತ ಪ್ರಮೋದಾದೇವಿ ಒಡೆಯರ್‌ ಪ್ರೆಸ್‌ ಮೀಟ್

Pramodadevi Wadiyar, a member of the royal family, will address the media soon after the High Court stayed the state government's move to set up the Chamundi Hill Authority.

ಮೈಸೂರು, ಆ.12,2024: (www.justkannada.in news) ಚಾಮುಂಡಿ ಬೆಟ್ಟದ ಪ್ರಾಧಿಕಾರ ರಚನೆ ಸಂಬಂಧದ ರಾಜ್ಯ ಸರಕಾರದ ನಡೆ ಬಗ್ಗೆ ಹೈಕೋರ್ಟ್‌ ತಡೆ ನೀಡಿದ ಬೆನ್ನಲ್ಲೇ ಇದೀಗ, ರಾಜಮನೆತನದ ಪ್ರಮೋದಾದೇವಿ ಒಡೆಯರ್‌ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇಂದು ಸಂಜೆ 4 ಗಂಟೆಗೆ ಮೈಸೂರು ಅರಮನೆಯಲ್ಲಿ ಪ್ರಮೋದದೇವಿ ಒಡೆಯರ್ ಮಾಧ್ಯಮಗೋಷ್ಠಿ ನಡೆಸಲಿದ್ದಾರೆ. ಪ್ರಾಧಿಕಾರ ರಚನೆ ಪ್ರಕರಣದ ಸಂಪೂರ್ಣ ಮಾಹಿತಿ ನೀಡಲಿರುವ ಪ್ರಮೋದದೇವಿ ಒಡೆಯರ್.

ಒಂದೆಡೆ ಇದೇ ದಿನ ಸಂಜೆ ೪ ಕ್ಕೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಮಹೋತ್ಸವದ ಉನ್ನತಮಟ್ಟದ ಸಮಿತಿ ಸಭೆ ಕರೆಯಲಾಗಿದೆ. ಇತ್ತ ಅದೇ ಸಮಯದಕ್ಕೆ ಸರಿಯಾಗಿ ಪ್ರಮೋದಾದೇವಿ ಒಡೆಯರ್‌ ಮೈಸೂರು ಅರಮನೆಯಲ್ಲಿ ಮಾಧ್ಯಮಗೋಷ್ಠಿ ನಿಗಧಿ. ಕುತೂಹಲ ಕೆರಳಿಸಿದ ಪ್ರಮೋದದೇವಿ ಒಡೆಯರ್ ಮಾಧ್ಯಮಗೋಷ್ಠಿ.

ಘಟನೆ ಹಿನ್ನೆಲೆ:

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇತ್ತೀಚೆಗೆ (ಮಾ.​ 7ರಂದು) ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮದ ಹೊಸ ಕಾಯ್ದೆ ಜಾರಿಗೊಳಿಸಿತ್ತು. ಇದು ಚಾಮುಂಡೇಶ್ವರಿ ದೇವಾಲಯದ ಮೇಲೆ ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟುಕುಗೊಳಿಸುವ ಹುನ್ನಾರ ಎಂಬ ಆರೋಪ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ಪ್ರಶ್ನಿಸಿ ಪ್ರಮೋದಾದೇವಿ ಒಡೆಯರ್​ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದರು.  ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ರಾಜ್ಯ ಸರ್ಕಾರದ ನಡೆಗೆ ತಾತ್ಕಾಲಿಕ ತಡೆ ನೀಡಿದೆ.

ಪ್ರತಿಮೆ ಸ್ಥಾಪನೆ ಸಂಬಂದ ಸುತ್ತೂರು ಮಠದ ಜತೆಗಿನ ವಿವಾದ ಇನ್ನು ಬಗೆಹರಿದಿಲ್ಲ.

ಕಾಯ್ದೆಯ ಸೆ.2(ಎ), 3,12(1), 14(3), 14(4), 16(1), 17(1), 20(1)(ಒ), 20(2) ಸಂಪೂರ್ಣ ಕಾನೂನು ಬಾಹಿರ ಎಂದು ಪ್ರಮೋದಾದೇವಿ ಒಡೆಯರ್‌ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಕಾಯ್ದೆ ಜಾರಿಯಿಂದ  ರಾಜಮನೆತದ ಹೆಸರಲ್ಲಿ ಸಂಕಲ್ಪದಲ್ಲಿ ಮಾಡುತ್ತಿದ್ದ ಪೂಜೆಗೂ ಬ್ರೇಕ್ ಹಾಕಲಾಗಿದೆ ಎಂದೇ ಆಕ್ಷೇಪಿಸಲಾಗಿತ್ತು.

ಚಾಮುಂಡಿ ಪ್ರಾಧಿಕಾರದ ಸ್ವತ್ತನ್ನು ಮಾರಾಟ ಮಾಡುವ ಅಧಿಕಾರ ನಿಗಮದ್ದು. ಯಾವುದೇ ಆಸ್ತಿಯನ್ನು ಮಾರಾಟ ಮಾಡುವ ಅಧಿಕಾರ, ಯಾವುದೇ ಆಸ್ತಿಯನ್ನು ಬಾಡಿಗೆಗೆ ನೀಡುವ ಅಧಿಕಾರ, ಜತೆಗೆ ಬದಲಾವಣೆ (ಎಕ್ಸಚೆಂಜ್)  ಮಾಡಿಕೊಳ್ಳುವ ಅಧಿಕಾರ ನಿಗಮಕ್ಕೆ ಇದೆ.

ಪ್ರಾಧಿಕಾರದ ನಿರ್ಧಾರದ ಮೇಲೆ ಅನುಮೋದನೆ ಮತ್ತು ತಿದ್ದುಪಡಿ ಅಧಿಕಾರ. ರಾಜಮನೆತನಕ್ಕೆ ಚಾಮುಂಡಿ ಬೆಟ್ಟದ ಬಗ್ಗೆ ಅಧಿಕಾರವೇ ಇಲ್ಲ. ಚಾಮುಂಡಿ ಬೆಟ್ಟದ ನಿಧಿಯ ಅಧಿಕಾರ ಸಂಪೂರ್ಣ ಸರ್ಕಾರದ್ದು. ಬರುವ ದೇಣಿಗೆ, ಕಾಣಿಕೆ, ಸೇವಾಶುಲ್ಕ, ಹುಂಡಿ ಎಲ್ಲಾ ಸರ್ಕಾರಕ್ಕೆ. ನಿಧಿಯ ಬಳಕೆಯ ಅಧಿಕಾರವೂ ಸಹ ಪ್ರಾಧಿಕಾರ ಮತ್ತು ಸರ್ಕಾರಕ್ಕೆ.

ಇದರಿಂದ ತಾವೇ ನಿರ್ಮಿಸಿದ ದೇವಾಲಯದಲ್ಲಿ ರಾಜಮನೆತನಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ.

key words:  CHAMUNDI, "POWER" CONTROVERSY, DASARA, COMMITTEE MEETING, Pramoda Devi Wadiyar, press meet.

SUMMARY:

Pramodadevi Wadiyar, a member of the royal family, will address the media soon after the High Court stayed the state government's move to set up the Chamundi Hill Authority.

The state government led by Chief Minister Siddaramaiah recently (March 11) a new act of Chamundeshwari Kshetra Development Authority Act was enacted. It was alleged that this was a conspiracy to curtail the entire authority of the royal family over the Chamundeshwari temple.

.