HomeBreaking NewsLatest NewsPoliticsSportsCrimeCinema

ಪ್ರತಾಪ್ ಸಹೋದರ ಸಾಚಾ ಅಲ್ಲ; he is habitual offender: ಎಂ.ಲಕ್ಷ್ಮಣ್.

01:34 PM Jan 01, 2024 IST | prashanth

ಮೈಸೂರು,ಜನವರಿ,1,2024(www.justkannada.in): ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ವಿರುದ್ದ ಕೇಳಿ ಬಂದಿರುವ ಮರ ಕಡಿದ ಆರೋಪ ಮತ್ತು ಎಫ್ ಐಆರ್ ನಿಂದ ಅವರ ಹೆಸರು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ .ಲಕ್ಷ್ಮಣ್, ಪ್ರತಾಪ್ ಸಿಂಹ ಸಹೋದರ ಸಾಚಾ ಅಲ್ಲ. ಜೂಜು, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಕ್ರಂ ಸಿಂಹ ಅಪರಾಧ ಹಿನ್ನೆಲೆ ಇರುವ ವ್ಯಕ್ತಿ, ಹಿಂದೆಯೂ ಕೂಡ ಹಲವಾರು ಪ್ರಕರಣಗಳು ದಾಖಲಾಗಿದ್ದವು.  ವಿಕ್ರಂ ಸಿಂಹ ವಿರುದ್ದ ಕೆಲವು ಪೋಲಿಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ನನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ನಿಮ್ಮನ್ನು ರಾಜಕೀಯವಾಗಿ ಮುಗಿಸಲು ಪ್ರತಾಪ್ ಸಿಂಹ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಲೀಡರ್ ರಾ..?  ಪ್ರತಾಪ್ ಸಿಂಹಗೆ ಈ ಬಾರಿಯೂ ಟಿಕೆಟ್ ಕೊಡಲಿ ಜನರು ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ಧಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರ ವಿಚಾರ ಹಿಡಿದುಕೊಂಡು ಒಕ್ಕಲಿಗರ ಸಮುದಾಯ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದೀರಿ

ಸಿದ್ದರಾಮಯ್ಯ ಅವರನ್ನು ಪ್ರತಾಪ್ ಸಿಂಹ ನೀವು ನೇರವಾಗಿ ಟಾರ್ಗೆಟ್ ಮಾಡಿದ್ದೀರಾ.  ಸಿದ್ದರಾಮಯ್ಯ ಅವರು ಎಂದಾದರೂ ನನ್ನ ಮಗ ಚುನಾವಣಾ ಆಕಾಂಕ್ಷಿ ಅಥವಾ ಅವನು ಈ ಬಾರಿ ಚುನಾವಣೆಗೆ ನಿಲ್ಲುತ್ತಾನೆ ಎಂದು ಹೇಳಿದ್ದಾರಾ..? ಇಲ್ಲಾ ಯತೀಂದ್ರ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಿಲ್ಲುತ್ತೇನೆ ಎಂದು ಹೇಳಿದ್ದಾರಾ ? ಇಲ್ಲ ಸಲ್ಲದ ವಿಚಾರಗಳನ್ನು ಹೇಳಿಕೊಂಡು ಭಾವನಾತ್ಮಕ ಮಾತುಗಳನ್ನು ಹೇಳಿಕೊಂಡು ಜನರ ತಲೆ ಕೆಡುಸುತಿದ್ದೀರಾ. ಈ ರೀತಿ ಸಿದ್ದರಾಮಯ್ಯ ಅವರ ವಿಚಾರ ಹಿಡಿದುಕೊಂಡು ಒಕ್ಕಲಿಗರ ಸಮುದಾಯ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದೀರಿ ಎಂದು ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.

ಸಹೋದರನ ಹೆಸರು ಎಫ್ ಐ ಆರ್ ಇಂದ ಕೈ ಬಿಡಲು ಕೇಂದ್ರದ ಯಾವ ಸಚಿವರಿಂದ ಪ್ರಭಾವ ಬೀರಿಸಿದ್ರಿ ಬಹಿರಂಗ ಪಡಿಸಿ.

ಜಯಮ್ಮ ಮತ್ತು ಅವರ ತಮ್ಮ ಆನಂದ್ ಜಮೀನು ಮಾಲೀಕರಾಗಿದ್ದು,  3.16 ಎಕರೆ ಜಮೀನು ಶುಂಠಿ ಬೆಳೆಯಲು ಕರಾರು ಮಾಡಿಕೊಳ್ಳುತ್ತಾರೆ. ಕರಾರು ಒಂದು ತಿಂಗಳು ಇರುತ್ತದೆ. ಒಂದು ತಿಂಗಳಲ್ಲಿ ಶುಂಠಿ ಬೆಳೆಯಲು ಸಾಧ್ಯವೇ? ಸಕಲೇಶಪುರದಲ್ಲಿ ಎಲ್ಲಾದರೂ ಶುಂಠಿ ಬೆಳೆದಿದ್ದಾರೆಯೇ, ಫಾರೆಸ್ಟ್ ಏರಿಯದಲ್ಲಿ 236 ಮರಗಳನ್ನು ಕತ್ತರಿಸುವ ಕೆಲಸ ಮಾಡಿದ್ದಾರೆ.  ಆ ಮರಗಳನ್ನು ಕಡಿದು ಜಪಾನ್ ಆಸ್ಟ್ರೇಲಿಯಾ ಅಂತಹ ದೇಶಕ್ಕೆ ಎಕ್ಸ್ ಪೋರ್ಟ್ ಮಾಡಲು ತೀರ್ಮಾನ ಮಾಡಿದ್ದರು.  ಅರಣ್ಯದಲ್ಲಿ ಮರ ಕಡಿದಿದ್ದರೂ ಕ್ರಮ ಕೈಗೊಳ್ಳದೆ ಅರಣ್ಯ ಇಲಾಖೆಯವರು ಕಡ್ಲೆಪುರಿ ತಿನ್ನುತ್ತಿದ್ದರಾ ಎಂದು ಎಂ.ಲಕ್ಷ್ಮಣ್  ಹರಿಹಾಯ್ದರು.

ವಿಕ್ರಂ ಸಿಂಹ ಬಿಟ್ಟು ಜಯಮ್ಮನ ವಿರುದ್ಧ ಎಫ್ ಐಆರ್  ಹಾಕಿದ್ದರು. ಎಫ್ ಐಅರ್ ನಲ್ಲಿ ವಿಕ್ರಮ್ ಸಿಂಹ ಹೆಸರಿದ್ದರೂ ಕೈಬಿಡಲು ಯಾರಿಂದ ಒತ್ತಡ ತಂದಿದ್ದೀರಾ..?  ಕೇಂದ್ರ ಸರ್ಕಾರದ ಅಧೀನದಲ್ಲಿ ಐಎಫ್ಎಸ್ ಅಧಿಕಾರಿಗಳು ಬರುವ ಕಾರಣ ಪ್ರತಾಪ್ ಸಿಂಹ ಪ್ರಭಾವ ಬೀರಿದ್ದಾರೆ ಎಂದು ಎಂ.ಲಕ್ಷ್ಮಣ್ ಆರೋಪಿಸಿದರು.

Key words: Pratap simha- brother - habitual offender-M. Laxman.

 

Tags :
habitual offenderM LaxmanPratap simha- brother
Next Article