For the best experience, open
https://m.justkannada.in
on your mobile browser.

ಮೈತ್ರಿ ಗೊಂದಲದ ನಡುವೆ ಪರಿಷತ್‌ ಚುನಾವಣೆ ʼ ಪೂರ್ವ ಸಿದ್ಧತಾ ಸಭೆ ʼಗೆ ಮುಂದಾದ ಬಿಜೆಪಿ.!

02:19 PM May 11, 2024 IST | mahesh
ಮೈತ್ರಿ ಗೊಂದಲದ ನಡುವೆ ಪರಿಷತ್‌ ಚುನಾವಣೆ ʼ ಪೂರ್ವ ಸಿದ್ಧತಾ ಸಭೆ ʼಗೆ ಮುಂದಾದ ಬಿಜೆಪಿ

ಮೈಸೂರು, ಮೇ.11, 2024: (www.justkannada.in news  ) ವಿಧಾನ ಪರಿಷತ್‌ ನ ಒಟ್ಟು ಆರು ಸ್ಥಾನಗಳಿಗೆ ಚುನಾವಣೆ ದಿನಾಂಕ ನಿಗಧಿಗೊಂಡಿದ್ದು ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಆದರೆ ವಿರೋಧ ಪಕ್ಷವಾದ ಬಿಜೆಪಿಗೆ ಈ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಇನ್ನು ಸಾಧ್ಯವಾಗಿಲ್ಲ. ಕಾರಣ ಮೈತ್ರಿ ಜಂಜಾಟ..!

ಈ ಗೊಂದಲದ ನಡುವೆಯೇ ಬಿಜೆಪಿ ಇಂದು ವಿಧಾನ ಪರಿಷತ್‌ ಚುನಾವಣೆ ಸಂಬಂಧ ಪೂರ್ವ ಸಿದ್ಧತಾ ಸಭೆ ಕರೆದಿದೆ. ಇಂದು ಮಧ್ಯಾಹ್ನ ೩. ೩೦ಕ್ಕೆ ಬೆಂಗಳೂರಿನ ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಈ ಸಭೆ ನಡೆಯಲಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಬೈ.ವಿಜಯೇಂದ್ರ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಪಕ್ಷದ ಸಂಘಟನಾ ಕಾರ್ಯದರ್ಶಿಗಳು, ಸಂಸದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ಎಲ್ಲಾ ೨೫  ಅಭ್ಯರ್ಥಿಗಳು ಸೇರಿ ಒಟ್ಟು ೨೯೦ ಮಂದಿ ಭಾಗವಹಿಸುವರು.

ವಿಪರ್ಯಾಸವೆಂದರೆ ಬಿಜೆಪಿ- ಜೆಡಿಎಸ್‌ ಮೈತ್ರಿ ಗೊಂದಲವೇ ಇನ್ನು ಬಗೆಹರಿದಿಲ್ಲ. ಈ ಹಂತದಲ್ಲಿ ಪೂರ್ವಭಾವಿ ಸಭೆ ನಡೆಸುವ ಉದ್ದೇಶವಾದರು ಏನು ಎಂಬ ಜಿಜ್ಞಾಸೆ ಪಕ್ಷದ ಟಿಕೆಟ್‌ ಆಕಾಂಕ್ಷಿಗಳನ್ನು ಕಾಡುತ್ತಿದೆ.

ಆರು ಸ್ಥಾನಗಳಿಗೆ ಎಲೆಕ್ಷನ್‌ :

ರಾಜ್ಯದ ಒಟ್ಟು ಮೂರು ಶಿಕ್ಷಕ ಕ್ಷೇತ್ರ ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ಜೂ. ೦೩ ರಂದು ಮತದಾನ ನಡೆಯಲಿದೆ. ಈ ಪೈಕಿ ಜೆಡಿಎಸ್‌ ಗೆ ಎಷ್ಟು ಸ್ಥಾನ ಬಿಟ್ಟುಕೊಡಬೇಕು ಎಂಬ ನಿರ್ಧಾರಕ್ಕೆ ಬಿಜೆಪಿ ಇನ್ನು ಬಂದಿಲ್ಲ. ಮೂಲಗಳ ಪ್ರಕಾರ, ಬೋಜೇಗೌಡ ಗೆದ್ದಿರುವ ಒಂದು ಕ್ಷೇತ್ರವನ್ನು ಮಾತ್ರ ಜೆಡಿಎಸ್‌ ಗೆ ಬಿಟ್ಟುಕೊಟ್ಟು ಉಳಿದ ೫ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ. ಆದರೆ ಅದಿನ್ನು ಅಂತಿಮಗೊಂಡಿಲ್ಲ.

ಪೆನ್‌ ಡ್ರೈವ್‌ ಪ್ರಾಬ್ಲಂ :

ಈ ನಡುವೆ ಜೆಡಿಎಸ್‌ ಜತೆ ಮೈತ್ರಿಗೆ ಪ್ರಜ್ವಲ್‌ ರೇವಣ್ಣ ಸೆಕ್ಸ್‌ ಸ್ಕ್ಯಾಂಡಲ್‌ ನ ಪೆನ್‌ ಡ್ರೈವ್‌ ಪ್ರಕರಣ ಬಿಜೆಪಿಗೆ ದೊಡ್ಡ ತಲೆ ನೋವಾಗಿದೆ. ಮೈತ್ರಿ ಮುಂದುವರೆಸುವುದೋ ಅಥವಾ ಅವರಿಂದ ಬಾಹ್ಯ ಬೆಂಬಲ ಪಡೆಯುವುದೋ ಎಂಬ ಜಿಜ್ಞಾಸೆ ಪಕ್ಷದ ಮುಖಂಡರದ್ದು.

ಯಾವ ಪಕ್ಷಕ್ಕೆ ಕ್ಷೇತ್ರವನ್ನು ಬಿಟ್ಟು ಕೊಡಲಾಗುತ್ತದೆ ಎನ್ನುವುದರ ಮೇಲೆ "ಮೈತ್ರಿ ಅಭ್ಯರ್ಥಿ' ಯಾರು ಎನ್ನುವುದು ನಿರ್ಧಾರವಾಗಲಿದೆ.

ಚುನಾವಣೆ ವಿವರ :

ಹಾಲಿ ವಿಧಾನ ಪರಿಷತ್‌  ಸದಸ್ಯರ ಅವಧಿ ಜೂ. ೨೧ ರಂದು ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮತದಾನಕ್ಕೆ ದಿನಾಂಕ ನಿಗಧಿ ಪಡಿಸಿದೆ.

ಈಶಾನ್ಯ ಪದವೀಧರ ಕ್ಷೇತ್ರ, ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಜತೆಗೆ ನೈರುತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ ಹಾಗೂ ಆಗ್ನೇಯ ಶಿಕ್ಷಕ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಈಶಾನ್ಯ ಪದವಿಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್‌ ಪಕ್ಷದ,  ಚಂದ್ರಶೇಖರ್ ಪಾಟೀಲ್ ಅವರ ಅವಧಿ ಮುಕ್ತಾಯವಾಗಿದೆ. ನೈಋತ್ಯ ಪದವಿಧರರ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಗೊಂಡಿದ್ದ ಆಯನೂರು ಮಂಜುನಾಥ್ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿಕೊಂಡಿದ್ದರು.

ಬೆಂಗಳೂರು ಪದವಿಧರ ಕ್ಷೇತ್ರದಲ್ಲಿ ಅ. ದೇವೇಗೌಡ ಅವಧಿ ಮುಕ್ತಾಯವಾಗಲಿದೆ. ಅದರಂತೆಯೇ, ಅಗ್ನಿಯ ಶಿಕ್ಷಕರ ಕ್ಷೇತ್ರದ ವೈ.ಎ.ನಾರಾಯಣಸ್ವಾಮಿ ಅವಧಿ ಮುಕ್ತಾಯ, ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದರು.

ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಗೊಂಡಿದ್ದ  ಜೆಡಿಎಸ್‌ ನ  ಎಸ್.ಎಲ್.ಬೋಜೇಗೌಡ ಅವಧಿ ಮುಕ್ತಾಯ ಜೂನ್ 21 ಕ್ಕೆ ಮುಕ್ತಾಯವಾಗಲಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಮರಿತಿಬ್ಬೇಗೌಡ ಜೆಡಿಎಸ್‌ ನಿಂದ ಸ್ಪರ್ಧಿಸಿ ಗೆದ್ದಿದ್ದರು, ಅವರು ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದು, ಈಗ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದರೂ, ಬಿಜೆಪಿ-ಜೆಡಿಎಸ್ ಮೈತ್ರಿಯ ಭವಿಷ್ಯ ನಿರ್ಧಾರವಾಗಿಲ್ಲ. ಇದರಿಂದಾಗಿ  ಚುನಾವಣಾ ಕಣ ಇನ್ನು ರಂಗು ಪಡೆದಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಜೆಡಿಎಸ್, ಈಗ ವಿಧಾನ ಪರಿಷತ್‌ ನಾವಣೆಯಲ್ಲೂ ಈ ಮೈತ್ರಿ ಮುಂದುವರಿಯುವುದೇ, ಒಂದುವೇಳೆ ಮುಂದುವರಿದರೆ ಕ್ಷೇತ್ರವನ್ನು ಯಾವ ಪಕ್ಷಕ್ಕೆ ಬಿಟ್ಟು ಕೊಡಲಾಗುತ್ತದೆ ಎನ್ನುವ ಗೊಂದಲ ಇನ್ನು ಬಗೆಹರಿದಿಲ್ಲ.

ಈ ಎರಡೂ ಪಕ್ಷಗಳ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ತೀರ್ಮಾನ ಹೊರಬೀಳದೇ ಇರುವುದು ಟಕೆಟ್ ಆಕಾಂಕ್ಷಿಗಳಲ್ಲಿ ತಳಮಳಕ್ಕೆ ಕಾರಣವಾಗಿದೆ.

ಈ ನಡುವೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಸೆಕ್ಸ್‌ ಸ್ಕ್ಯಾಂಡಲ್‌ ಬಹಿರಂಗಗೊಂಡು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಎಡೆಮಾಡಿದೆ. ಈ ಘಟನೆಯಿಂದ ಅಂತರ ಕಾಯ್ದುಕೊಂಡಿರುವ ಬಿಜೆಪಿ ಮೈತ್ರಿ ಬಗ್ಗೆ ಮುಗ್ಗುಮ್ಮಾಗಿಯೇ ಇದೆ. ಪ್ರಧಾನಿ ನರೇಂದ್ರ ಮೋದಿ, ಅಮಿತಾ ಶಾ ಹಾಗೂ ನಡ್ಡಾ ಆಧಿಯಾಗಿ ಬಿಜೆಪಿ ಹೈಕಮಾಂಡ್‌ , ಪ್ರಜ್ವಲ್‌ ಸೆಕ್ಸ್‌ ಸ್ಕ್ಯಾಂಡಲ್‌ ಪ್ರಕರಣದಲ್ಲಿ ಅಂತರ ಕಾಯ್ದುಕೊಂಡೇ ಬರುತ್ತಿದ್ದಾರೆ. ಇದು ಸಹ ಮೈತ್ರಿ ಗೊಂದಲ ಮತ್ತಷ್ಟು ಜಠಿಲಗೊಳಿಸಿದೆ.

key words : BJP to hold, preparatory meeting, for Council polls, amid jds , alliance row

summary: 

BJP to hold 'preparatory meeting' for Council polls amid alliance row

The election dates for six seats of the Parishad have been fixed and the filing of nominations has begun. However, the opposition BJP is yet to finalize candidates in this regard. Because of the alliance...!

Ironically, the BJP-JD(S) alliance is yet to be resolved. The party's ticket aspirants are wondering what the purpose of holding a preliminary meeting at this stage.

The BJP-JD(S), which had formed an alliance for the Lok Sabha elections, are yet to resolve the issue of whether the alliance will continue in the Legislative Council elections and whichever party will be given the seat if it continues.

Tags :

.