For the best experience, open
https://m.justkannada.in
on your mobile browser.

29 ಮಂದಿ ಪತ್ರಕರ್ತರಿಗೆ ಒಲಿದ 'ಪ್ರೆಸ್‌ ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿ'.

04:19 PM Dec 26, 2023 IST | prashanth
29 ಮಂದಿ ಪತ್ರಕರ್ತರಿಗೆ ಒಲಿದ  ಪ್ರೆಸ್‌ ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿ

ಬೆಂಗಳೂರು,ಡಿಸೆಂಬರ್,26,2023(www.justkannada.in):  ಬೆಂಗಳೂರು ಪ್ರೆಸ್‌ ಕ್ಲಬ್ ವತಿಯಿಂದ ಕೊಡಮಾಡುವ 'ಪ್ರೆಸ್‌ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿ'ಗೆ 29 ಮಂದಿ ಪತ್ರಕರ್ತರು ಆಯ್ಕೆಯಾಗಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ  ವರ್ಷದ ವ್ಯಕ್ತಿ ಪ್ರಶಸ್ತಿ ಹಾಗೂ ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ 'ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿ' ಪ್ರಕಟ ಮಾಡಲಾಗಿದೆ.

ಕಾರ್ಮಿಕ ಸಚಿವ ಸಂತೊಷ್ ಲಾಡ್ ಹಾಗೂ ಏಷ್ಯಾ ಬಾಸ್ಕೆಟ್ ಬಾಲ್ ಫೆಡರೇಷನ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮೊದಲ ಕನ್ನಡಿಗ ಡಾ. ಕೆ. ಗೋವಿಂದರಾಜು ಅವರಿಗೆ 'ಪ್ರೆಸ್‌ ಕ್ಲಬ್ ಪ್ರಶಸ್ತಿ ನೀಡಲಾಗಿದೆ.

ಪ್ರೆಸ್‌ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದ ಪತ್ರಕರ್ತರ ಪಟ್ಟಿ ಹೀಗಿದೆ ನೋಡಿ  ಪಟ್ಟಿ ಹೀಗಿದೆ.

ಸದಾಶಿವ ಶೆಣೈ. ಎಂ. ನಾಗರಾಜು, ಕೂಡ್ಲಿ ಗುರುರಾಜ್, ಕೆ.ಕೆ ಮೂರ್ತಿ, ರೂಪಾ ಆರ್. ರಾವ್, ಸತೀಶ್‌ಕುಮಾ‌ರ್ ಬಿ.ಎಸ್. ರಾಕೇಶ್ ಪ್ರಕಾಶ್,   ಕೆ. ಆರ್. ಶಂಕರ್, ರಮೇಶ್ ಬಿ.ಎನ್, ಕಿರಣ್ ಹೆಚ್.ವಿ, ಚನ್ನಕೃಷ್ಣ ಪಿ.ಕೆ, ವಿಜಯ್‌ಕುಮಾರ್ ಮಲಗಿಹಾಳ್‌, ಮನೋಜ್‌ಕುಮಾರ್, ಮುತ್ತು. ಪಿ, ಶ್ರೀಕಂಠ ಶರ್ಮ. ಆರ್, ಸಿದ್ದೇಶ್‌ಕುಮಾರ್ ಹೆಚ್.ಪಿ, , ಜಿ, ಅನಂತರಾಮು ಸಂಕ್ಲಾಪುರ್. ಎಲ್, ಕೌಶಿಕ್. ಆರ್. ಲಕ್ಷ್ಮಿಸಾಗರ ಸ್ವಾಮಿಗೌಡ, ಚಿದಾನಂದ ಪಟೇಲ್, ಅಫ್ಘಾನ್ ಯಾಸ್ಮಿನ್, ಚಂದ್ರಶೇಖರ್. ಎಂ, ಭಾಸ್ಕರ್ ಕೆ.ಎಸ್. ಸುಭಾಷ್ ಹೂಗಾರ್, ಪ್ರಸನ್ನಕುಮಾರ್ ಲೂಯಿಸ್, ಶಂಕರೇಗೌಡ ಹೆಚ್.ಡಿ, o ಜನಾರ್ಧನಾಚಾರಿ ಕೆ.ಎಸ್. ಲಿಂಗರಾಜು ಡಿ. ನೊಣವಿನಕೆರೆ, ಮೋಹನ್‌ರಾವ್ ಸಾವಂತ್ ಅವರಿಗೆ  ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿಸೆಂಬರ್ 31 ರಂದು ಬೆಳಿಗ್ಗೆ 11.30ಕ್ಕೆ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಯಲಿದ್ದು,  ಸಿಎಂ  ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Key words:  Press Club -Lifetime Achievement Award- 29 journalists

Tags :

.