For the best experience, open
https://m.justkannada.in
on your mobile browser.

ಸಿಎಂ ಪ್ರಧಾನ ಕಾರ್ಯದರ್ಶಿಗೆ   ಮತದಾನ ಚಲಾಯಿಸಲು ನಿರಾಕರಣೆ..?

01:33 PM Apr 26, 2024 IST | mahesh
ಸಿಎಂ ಪ್ರಧಾನ ಕಾರ್ಯದರ್ಶಿಗೆ   ಮತದಾನ ಚಲಾಯಿಸಲು ನಿರಾಕರಣೆ

ತಿರುವನಂತಪುರ, ಏ.26, 2024  :(www.justkannada.in news ) ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಧಾನ ಕಾರ್ಯದರ್ಶಿ ಕೆಎಂ ಅಬ್ರಹಾಂ ಅವರಿಗೆ ಮತದಾನ ಮಾಡಲು ಸಾಧ್ಯವಾಗಿಲ್ಲ.

ಅಬ್ರಹಾಂ ಅವರ ಮತದಾರರ ಗುರುತಿನ ಚೀಟಿಗೆ ಸಮಾನವಾದ ಮತ್ತೊಂದು ಗುರುತಿನ ಚೀಟಿ ಇದ್ದ ಕಾರಣ ಮತದಾನ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಲೋಕಸಭೆ ಚುನಾವಣೆ  ವೇಳೆ ಅನಿರೀಕ್ಷಿತ ಅಡಚಣೆ ಎದುರಿಸಿದರು.

ಅಬ್ರಹಾಂ ಅವರ ಸಂಖ್ಯೆ ಇರುವ ಗುರುತಿನ ಚೀಟಿ ಮತದಾರರ ಪಟ್ಟಿಯಲ್ಲಿ ಮತ್ತೊಬ್ಬ ಮಹಿಳೆಯ ಹೆಸರಿನಲ್ಲಿ ದಾಖಲಾಗಿತ್ತು. ಒಂದೇ ಸಂಖ್ಯೆಯ ಎರಡು ಗುರುತಿನ ಚೀಟಿಗಳು ಹೇಗೆ ಬಂದವು ಎಂಬುದು ಸ್ಪಷ್ಟವಾಗಿಲ್ಲ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಕಣ್ಣೂರಿನ ಮತಗಟ್ಟೆ ಸಂಖ್ಯೆ 161 ರಲ್ಲಿ ಮತದಾನ ಮಾಡಿದರು.

ಒಟ್ಟು 194 ಅಭ್ಯರ್ಥಿಗಳು ಕಣದಲ್ಲಿದ್ದು, ರಾಜ್ಯದಲ್ಲಿ 2.75 ಕೋಟಿಗೂ ಹೆಚ್ಚು ಅರ್ಹ ಮತದಾರರಿದ್ದಾರೆ. ಒಟ್ಟು 2,77,49,159 ನೋಂದಾಯಿತ ಮತದಾರರಿದ್ದು, ಐದು ಲಕ್ಷಕ್ಕೂ ಹೆಚ್ಚು ಮೊದಲ ಬಾರಿ ಮತದಾರರಿದ್ದಾರೆ. 20 ಕ್ಷೇತ್ರಗಳ ಪೈಕಿ ಕೊಟ್ಟಾಯಂನಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು 14 ಇದ್ದರೆ, ಅತೀ ಕಡಿಮೆ,  ಅಲತ್ತೂರ್‌ನಲ್ಲಿ ಐದು ಅಭ್ಯರ್ಥಿಗಳು ಇದ್ದಾರೆ. ಗಮನಾರ್ಹ ಅಂಕಿಅಂಶಗಳೆಂದರೆ ಕೋಝಿಕ್ಕೋಡ್‌ನಲ್ಲಿ 13 ಅಭ್ಯರ್ಥಿಗಳು ಮತ್ತು ಕೊಲ್ಲಂ ಮತ್ತು ಕಣ್ಣೂರಿನಲ್ಲಿ ತಲಾ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕೇರಳದಲ್ಲಿ ಸ್ಪರ್ಧಿಸಿರುವ 194 ಅಭ್ಯರ್ಥಿಗಳ ಪೈಕಿ 169 ಪುರುಷರು ಮತ್ತು 25 ಮಹಿಳೆಯರು. ವಡಕರ ಕ್ಷೇತ್ರದಲ್ಲಿ ಅತಿ ಹೆಚ್ಚು ಮಹಿಳಾ ಅಭ್ಯರ್ಥಿಗಳಿದ್ದು, ನಾಲ್ವರು ಮಹಿಳೆಯರು ಸ್ಪರ್ಧಿಸಿದ್ದಾರೆ.

ಈ ನಡುವೆ ಇಂದು ಇಡುಕ್ಕಿಯಲ್ಲಿ ಡಬಲ್ ಮತದಾನ ನಡೆದಿದೆ. ಚೆಮ್ಮನ್ನಾರ್ ಸೇಂಟ್ ಕ್ಸೇವಿಯರ್ಸ್ ಹೈಯರ್ ಸೆಕೆಂಡರಿ ಶಾಲೆಯ ಬೂತ್ ಸಂಖ್ಯೆ ಐವತ್ತೇಳರಲ್ಲಿ ಮತಗಟ್ಟೆ ಅಧಿಕಾರಿಗಳು ಮತದಾನ ಮಾಡಲು ಆಗಮಿಸಿದ್ದ ಮಹಿಳೆಯನ್ನು ಅಡ್ಡಗಟ್ಟಿದ್ದಾರೆ. ಆದರೆ, ತನಿಖೆ ನಡೆಸಿದಾಗ ಆಕೆಯ ಬೆರಳಿನ ಶಾಯಿಯ ಕಲೆ ಸಂಪೂರ್ಣವಾಗಿ ಹೋಗದ ಕಾರಣ ಆಕೆ ಈಗಾಗಲೇ ತಮಿಳುನಾಡಿನಲ್ಲಿ ಮತದಾನ ಮಾಡಿರುವುದು ಪತ್ತೆಯಾಗಿದೆ.

ಪ್ರಧಾನಿ ಮೋದಿ ಅನರ್ಹ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಗೆ ಕ್ಷಣಗಣನೆ..!

ಕೂಡಲೇ ಆಕೆಯನ್ನು ಮನೆಗೆ ಮರಳುವಂತೆ ಅಧಿಕಾರಿಗಳು ಸೂಚಿಸಿದರು. ಇದಕ್ಕೂ ಮುನ್ನ ಮಹಿಳೆಯ ಪತಿ ಬೂತ್‌ಗೆ ಭೇಟಿ ನೀಡಿ ಮತ ಚಲಾಯಿಸಿ ತೆರಳಿದ್ದರು.

courtesy: newsable asianet

key words : kerala-cm, pinarayi-vijayan, principal-secretary, denied-to-vote, after, having-two, identity-cards

summary : 

 Chief Minister Pinarayi Vijayan's Principal Secretary KM Abraham faced an unexpected hurdle during the Lok Sabha elections as he was unable to cast his vote after possessing another identity card with the same number as his voter ID card. The identity card bearing Abraham's number was registered under the name of another woman on the voter's list. It is not clear how two ID cards with the same number came up.

Tags :

.

© Copyright, All Rights Reserved.