For the best experience, open
https://m.justkannada.in
on your mobile browser.

ದಕ್ಷಿಣ ಶಿಕ್ಷಕರ ಕ್ಷೇತ್ರ : ಕಾಂಗ್ರೆಸ್‌, ಮೈತ್ರಿ ಅಭ್ಯರ್ಥಿಗೆ ಖಾಸಗಿ ಶಾಲೆಗಳ ಒಕ್ಕೂಟ ಸೆಡ್ಡು..!

07:15 PM May 15, 2024 IST | mahesh
ದಕ್ಷಿಣ ಶಿಕ್ಷಕರ ಕ್ಷೇತ್ರ   ಕಾಂಗ್ರೆಸ್‌  ಮೈತ್ರಿ ಅಭ್ಯರ್ಥಿಗೆ ಖಾಸಗಿ ಶಾಲೆಗಳ ಒಕ್ಕೂಟ ಸೆಡ್ಡು

ಮೈಸೂರು, ಮೇ.15, 2024 :(www.justkannada.in news) CBSE, ICSE ಮತ್ತು state private Association ವತಿಯಿಂದ ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ರಾಧಾಕೃಷ್ಣ ಅವರು ವಿಧಾನಪರಿಷತ್ ಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.

ಈ ಸಂಬಂಧ ಇಂದು ರಾಧಕೃಷ್ಣ ಅವರು ಮೈಸೂರಲ್ಲಿ  ಸಭೆ ನಡೆಸಿ ಚರ್ಚಿಸಿದ್ದು ನಾಮಪತ್ರ ಸಲ್ಲಿಕೆಗೆ ತೀರ್ಮಾನಿಸಿದ್ದಾರೆ.

ಈ ಕುರಿತು ʼ ಜಸ್ಟ್ ಕನ್ನಡʼ  ಜತೆ ಮಾತನಾಡಿರುವ  ರಾಮಕೃಷ್ಣ ಅವರು ಹೇಳಿದಿಷ್ಟು..

ರಾಧಾಕೃಷ್ಣ

ಖಾಸಗಿಶಾಲೆಗಳ ಸಮಸ್ಯೆಗೆ  ಸರಕಾರದ ಮಟ್ಟದಲ್ಲಿ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಹೀಗಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಖಾಸಗಿ ಶಾಲೆಗಳಿಂದ ಒತ್ತಡವಿದೆ. ಈ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಒಂದು ಸುತ್ತಿನ ಸಭೆ ನಡೆಸಲಾಗಿದೆ. ನಾಮಪತ್ರ ಸಲ್ಲಿಕೆಗೆ ನಾಳೆಯೇ ಕಡೆಯ ದಿನವಾದ್ದರಿಂದ ಅಗತ್ಯ ಸಿದ್ಧತೆ ನಡೆಸಲಾಗಿದೆ.

ಖಾಸಗಿ ಶಾಲೆಗಳ ಒಕ್ಕೂಟದಲ್ಲಿ 300 ಶಾಲೆಗಳಿದ್ದು ಒಟ್ಟು  6500 ಶಿಕ್ಷಕರು ಮತದಾರರಿದ್ದಾರೆ. ಈ ಮತದಾರರೇ ನಮ್ಮ ಶಕ್ತಿಯಾಗಿದ್ದು, ಖಾಸಗಿ ಶಾಲೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ತೀರ್ಮಾನ ಬೆಂಬಲಿಸುವಂತೆ ಈ ಶಿಕ್ಷಕರ ಮನವೊಲಿಸಲಾಗುತ್ತದೆ. ಖಾಸಗಿ ಶಾಲೆಶಿಕ್ಷಕರು ಕೈ ಹಿಡಿದಲ್ಲಿ ಗೆಲವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

key words: south teacher constituency, election, private school association, contest

summary:

South Teachers' Constituency: Private schools' union to field against Congress, alliance candidate

Radhakrishna, secretary of the Federation of Private Schools on behalf of CBSE, ICSE and State Private Association, has decided to contest for the Legislative Council from the South Teachers' constituency.

There are 300 schools in the private school's federation and there are a total of 6,500 teachers and voters. These voters are our strength, and these teachers will be persuaded to support our decision to find a solution to the problem of private schools. He expressed confidence that if the private school teachers hold hands, victory will be assured.

Tags :

.