ಆರ್.ಡಿ.ಪಾಟೀಲ್ ರಕ್ಷಣೆಗೆ ಪ್ರಿಯಾಂಕ್ ಖರ್ಗೆ ನಿಂತಿದ್ದಾರೆ- ಮಾಜಿ ಸಚಿವ ಅರಗ ಜ್ಞಾನೇಂದ್ರ ಆರೋಪ.
ಬೆಂಗಳೂರು,ನವೆಂಬರ್,9,2023(www.justkannada.in): ಕೆಇಎ ನಡೆಸಿದ ಎಫ್ಡಿಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿ ಆರ್ ಡಿ ಪಾಟೀಲ್ ತಲೆಮರಿಸಿಕೊಂಡಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಗೃಹಸಚಿವ ಅರಗಜ್ಞಾನೇಂದ್ರ, ಆರ್.ಡಿ.ಪಾಟೀಲ್ ರಕ್ಷಣೆಗೆ ಸಚಿವ ಪ್ರಿಯಾಂಕ್ ಖರ್ಗೆ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಎಲ್ಲಾ ಪರೀಕ್ಷೆಗಳಲ್ಲೂ ಆರ್.ಡಿ.ಪಾಟೀಲ್ ಅಕ್ರಮ ಮಾಡಿದ್ದಾನೆ. ನಮ್ಮ ಸರ್ಕಾರ ಇದ್ದಾಗ ಹೆಡೆಮುರಿ ಕಟ್ಟಿ ಬಂಧಿಸಿದ್ದವು. ಬಳಿಕ ಜಾಮೀನಿನ ಮೇಲೆ ಆರ್.ಡಿ.ಪಾಟೀಲ್ ಹೊರ ಬಂದಿದ್ದ. ಈಗ ಆರ್.ಡಿ ಪಾಟೀಲ್ ತಪ್ಪಿಸಿಕೊಂಡು ಹೋಗಲು ಬಿಟ್ಟಿದ್ಯಾರು? ಪೊಲೀಸರ ಕೈವಾಡವಿಲ್ಲದೆ ಆತ ತಪ್ಪಿಸಿಕೊಂಡು ಹೋಗಲು ಆಗಲ್ಲ.
ಆರ್.ಡಿ.ಪಾಟೀಲ್ ರಕ್ಷಣೆಗೆ ಪ್ರಿಯಾಂಕ್ ಖರ್ಗೆ ನಿಂತಿದ್ದಾರೆ. ಪರೀಕ್ಷಾ ಕೇಂದ್ರ ಆಯ್ಕೆ ಮಾಡುವುದು ಸಹ ಆರ್.ಡಿ.ಪಾಟೀಲ್. ಇಂತಹ ವ್ಯಕ್ತಿಗಳಿಗೆ ರಕ್ಷಣೆ ಕೊಡುವುದು ಕಾಂಗ್ರೆಸ್ ಸರ್ಕಾರದವರು. ಪೊಲೀಸರ ವಿರುದ್ಧವೂ ತನಿಖೆ ಮಾಡಲಿ ಎಂದು ಅರಗ ಜ್ಞಾನೇಂದ್ರ ಆಗ್ರಹಿಸಿದರು.
Key words: Priyank Kharge - standing up - RD Patil – former Minister Araga jnanendra