ನಾಗಮಂಗಲ ಗಲಭೆ ವೇಳೆ ಪಾಕ್ ಪರ ಘೋಷಣೆ ಆರೋಪ: ಆರ್.ಅಶೋಕ್ ಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು
12:42 PM Sep 17, 2024 IST
|
prashanth
ಮಂಡ್ಯ,ಸೆಪ್ಟಂಬರ್,17,2024 (www.justkannada.in): ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ಮಾಹಿತಿ ಇದೆ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಯಾರೂ ಪಾಕ್ ಪರ ಘೋಷಣೆ ಕೂಗಿಲ್ಲ.ಆರ್.ಅಶೋಕ್ ಸುಳ್ಳು ಹೇಳಿದ್ದಾರೆ. ಅಶೋಕ್ ಮೇಲೆಯೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಶೋಕ್ ಮಾತಿನಲ್ಲಿ ಸ್ವಲ್ಪ ಹಿಡಿತ ಇರಬೇಕು. ಅಶೋಕ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ ವಿಪಕ್ಷನಾಯಕನಾಗಿ ಸರಿಯಾಗಿ ಮಾತನಾಡೋದನ್ನ ಕಲಿಯಬೇಕು ಎಂದು ಸಚಿವ ಚಲುವರಾಯಸ್ವಾಮಿ ಟಾಂಗ್ ಕೊಟ್ಟರು.
Key words: pro-Pak, slogan, Nagamangala riots, R. Ashok, Chaluvarayaswamy
Next Article