HomeBreaking NewsLatest NewsPoliticsSportsCrimeCinema

ಮೈಕ್ರೋಸಾಫ್ಟ್  ಕ್ಲೌಡ್ ಸರ್ವೀಸ್ ನಲ್ಲಿ ಸಮಸ್ಯೆ: ಭಾರತೀಯ ವಿಮಾನಯಾನದಲ್ಲಿ ವ್ಯತ್ಯಯ

01:35 PM Jul 19, 2024 IST | prashanth

ನವದೆಹಲಿ, ಜುಲೈ,19,2024 (www.justkannada.in):ಮೈಕ್ರೋಸಾಫ್ಟ್ ಕಾರ್ಪೊರೇಷನ್ ನ  ಕ್ಲೌಡ್ ಸೇವೆಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು ಈ ಹಿನ್ನೆಲೆಯಲ್ಲಿ  ವಿಶ್ವದಾದ್ಯಂತ ತೊಂದರೆ ಉಂಟಾಗಿದೆ.

ಮೈಕ್ರೋಸಾಫ್ಟ್  ಕ್ಲೌಡ್ ಸರ್ವೀಸ್ ನಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಭಾರತೀಯ ವಿಮಾನಯಾನದಲ್ಲೂ ವ್ಯತ್ಯಯ ಉಂಟಾಗಿದೆ.  ಇಂಡಿಗೊ, ಅಕಾಸಾ ಏರ್ಲೈನ್ಸ್ ಮತ್ತು ಸ್ಪೈಸ್ ಜೆಟ್ ಸೇರಿದಂತೆ ಹಲವಾರು ವಿಮಾನಯಾನ ಸಂಸ್ಥೆಗಳು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ. ಬೆಂಗಳೂರಿನ ಕೆಐಎಬಿಯಲ್ಲೂ ತೊಂದರೆಯಾಗಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಆನ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ  ಟಿಕೆಟ್ ಬುಕ್ಕಿಂಗ್ ಆಗದೆ ಸಿಬ್ಬಂದಿ ಮತ್ತು ಪ್ರಯಾಣಿಕರು ಪರದಾಟ ನಡೆಸಿದ್ದಾರೆ.

ಮೈಕ್ರೋಸಾಫ್ಟ್ ನ  ಕ್ಲೌಡ್ ಸರ್ವೀಸ್ ನಲ್ಲಿ ಸಮಸ್ಯೆಯಿಂದಾಗಿ ಷೇರು ಮಾರುಕಟ್ಟೆ, ಬ್ಯಾಂಕಿಂಗ್ ನಲ್ಲೂ ಪರಿಣಾಮ ಬೀರಿದೆ ಎನ್ನಲಾಗಿದೆ.

Key words: Problem, Microsoft Cloud, Services, Indian Airlines

Tags :
Indian AirlinesMicrosoft CloudproblemServices
Next Article