For the best experience, open
https://m.justkannada.in
on your mobile browser.

ನಾನು ಪ್ರೊಡ್ಯುಸರೂ ಅಲ್ಲ, ಡೈರೆಕ್ಟರೂ ಅಲ್ಲ, ಜಸ್ಟ್ ಎಕ್ಸಿಬಿಟರ್- ಡಿಸಿಎಂ  ಡಿಕೆ ಶಿವಕುಮಾರ್.

04:06 PM May 14, 2024 IST | prashanth
ನಾನು ಪ್ರೊಡ್ಯುಸರೂ ಅಲ್ಲ  ಡೈರೆಕ್ಟರೂ ಅಲ್ಲ  ಜಸ್ಟ್ ಎಕ್ಸಿಬಿಟರ್  ಡಿಸಿಎಂ  ಡಿಕೆ ಶಿವಕುಮಾರ್

ಬೆಂಗಳೂರು, ಮೇ,14, 2024 (www.justkannada.in):  ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ, ಪೆನ್ ಡ್ರೈವ್ ಪ್ರಕರಣ ಸಂಬಂಧ ಇದರ ಹಿಂದೆ ತಿಮಿಂಗಿಲ ಇದೆ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್,  , ವಿಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಹೆಸರು ಹೇಳಿದರೆ ಮೀಡಿಯಾದಲ್ಲಿ ಹಾಕುತ್ತಾರೆ ಅಂತ ಮಾತನಾಡುತ್ತಾರೆ. ಎಲ್ಲದಕ್ಕೂ ಕಾಲ ಉತ್ತರ ನೀಡುತ್ತದೆ. ನಾನು ಪ್ರೊಡ್ಯುಸರೂ ಅಲ್ಲ, ಡೈರೆಕ್ಟರೂ ಅಲ್ಲ. ನಾನು ಜಸ್ಟ್ ಎಕ್ಸಿಬಿಟರ್  ಎಂದು ಹೇಳಿದರು.

ನಾನು ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ, ನನಗೆ ಸಂಬಂಧವೂ ಇಲ್ಲ. ನಾನೂ ಇದನ್ನೆಲ್ಲ ಅನುಭವಿಸಿಯೇ ಬಂದಿದ್ದೇನೆ. ನಾನು ಕಷ್ಟಪಟ್ಟರೂ, ಇನ್ನೊಬ್ಬರಿಗೆ ಒಳ್ಳೆಯದನ್ನೇ ಬಯಸುತ್ತೇನೆ. ಇದೆಲ್ಲದಕ್ಕೂ ಸಮಯವೇ ಉತ್ತರ ಕೊಡುತ್ತದೆ. ಆದರೆ ನನ್ನ ಬ್ರದರ್ ಕುಮಾರಣ್ಣನಿಗೆ ಮಾತ್ರ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

ಎಸ್ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. ಅವರದ್ದು ದೊಡ್ಡ ಕುಟುಂಬ ಹೀಗೆಲ್ಲ ಆಗಬಾರದಿತ್ತು ಅಂತ ನನಗೂ ಬೇಸರವಿದೆ, ನೋವಿದೆ. ಐ ಫೀಲ್ ಸಾರಿ ಫಾರ್ ಹಿಮ್ ಎಂದು  ಡಿ.ಕೆ ಶಿವಕುಮಾರ್ ಹೇಳಿದರು.

Key words: producer, exhibitor, DCM, DK Shivakumar

Tags :

.