HomeBreaking NewsLatest NewsPoliticsSportsCrimeCinema

ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ: ಅರ್ಜಿ ವಿಚಾರಣೆ ಸೆ.2ಕ್ಕೆ ಮುಂದೂಡಿದ ಹೈಕೋರ್ಟ್

04:59 PM Aug 31, 2024 IST | prashanth

ಬೆಂಗಳೂರು,ಆಗಸ್ಟ್,31,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ಸೆಪ್ಟಂಬರ್ 2ಕ್ಕೆ ಮುಂದೂಡಿಕೆ ಮಾಡಿದೆ.

ಇಂದು ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಸ್ನೇಹಮಯಿ ಕೃಷ್ಣ ಪರ  ಹಿರಿಯ ವಕೀಲ  ಕೆಜಿ ರಾಘವನ್ ಅವರು ವಾದ ಮಂಡನೆಗೆ ಅವಕಾಶ ಕೋರಿದ  ಹಿನ್ನೆಲೆ ವಿಚಾರಣೆಯನ್ನ ಸೆಪ್ಟಂಬರ್ 2(ಸೋಮವಾರ)ರ ಮಧ್ಯಾಹ್ನ 2.30ಕ್ಕೆ  ಮುಂದೂಡಿಕೆ ಮಾಡಿದೆ.

ಇಂದು ಸಿಎಂ ಸಿದ್ದರಾಮಯ್ಯ ಪರ ವಕೀಲರ ರವಿವರ್ಮಕುಮಾರ್, ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ,  ಪ್ರದೀಪ್ ಕುಮಾರ್ ಪರ ಪ್ರಭುಲಿಂಗ ನಾವದಗಿ, ಹಾಗೂ ಟಿಜೆ ಅಬ್ರಾಹಂ ಪರ ರಂಗನಾಥ ರೆಡ್ಡಿ ಸುದೀರ್ಘ ವಾದ ಮಂಡಿಸಿದರು.

ಅಂತಿಮವಾಗಿ ವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ಮುಖ್ಯಮಂತ್ರಿ ಸಿದ್ಧರಾಮಯ್ಯ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿಕೆ ಮಾಡಿದೆ.

Key words:  prosecution, against, CM, High Court, adjourned, hearing

Tags :
adjournedagainstCMhearingHigh Courtprosecution
Next Article