ಸಿಎಂ ಬಂಧನವೇನಾದ್ರೂ ಆದರೆ, ರಾಜ್ಯದಲ್ಲಿ ರಕ್ತ ಕ್ರಾಂತಿ ನಡೆದು ಹೋಗುತ್ತೆ- ಎಂಎಲ್ ಸಿ ಡಾ.ತಿಮ್ಮಯ್ಯ
ಮೈಸೂರು,ಆಗಸ್ಟ್,17,2024 (www.justkannada.in): ಮುಡಾ ಸೈಟ್ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದಕ್ಕೆ ಕಾಂಗ್ರೆಸ್ ಪಾಳಯದಿಂದ ಸಾಕಷ್ಟು ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಇದೀಗ ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ ಕೂಡ ರಾಜ್ಯಪಾಲರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಎಂಎಲ್ ಸಿ ಡಾ.ತಿಮ್ಮಯ್ಯ, ಕೇಂದ್ರದ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ರಾಜ್ಯಪಾಲರು ಈ ರೀತಿ ನಡೆದುಕೊಳ್ಳುವುದು ಸರಿಯಿಲ್ಲ. ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಎಳ್ಳಷ್ಟು ಇಲ್ಲ. ಈ ಪ್ರಕರಣದಿಂದ ನಿರ್ದೋಷಿಗಳಾಗಿ ಹೊರ ಬರುವ ವಿಶ್ವಾಸ ಇದೆ. ಒಂದು ವೇಳೆ ಸಿಎಂ ಬಂಧನವೇನಾದರೂ ಆದರೆ, ರಾಜ್ಯದಲ್ಲಿ ರಕ್ತ ಕ್ರಾಂತಿ ನಡೆದುಹೋಗುತ್ತೆ ಎಂದು ಹೇಳಿದ್ದಾರೆ.
ಸಿಎಂ ಈಗಾಗಲೇ ಸಚಿವ ಸಂಪುಟ ಕರೆದಿದ್ದಾರೆ ನಾವೂ ಕೂಡ ಹೋಗುತ್ತಿದ್ದೇವೆ. ಈ ಪ್ರಕರಣದಲ್ಲಿ ಸಿಎಂ ಸಂಪೂರ್ಣ ನಿರ್ದೋಷಿಗಳು. ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಎಂಎಲ್ಸಿ ಡಾ.ತಿಮ್ಮಯ್ಯ ಹೇಳಿದ್ದಾರೆ.
Key words: prosecution, CM Siddaramaiah, revolution, MLC, Dr. Thimmaiah