For the best experience, open
https://m.justkannada.in
on your mobile browser.

ಅನಿವಾರ್ಯವಾಗಿ ಪ್ರತಿಭಟನೆ: ಕೇಂದ್ರದ ಮೇಲೆ ಒತ್ತಡ ಹಾಕಿದ್ರೆ ಅದು ಭಿಕ್ಷೆನಾ..? ಸಚಿವ ಹೆಚ್.ಕೆ ಪಾಟೀಲ್.

11:10 AM Feb 06, 2024 IST | prashanth
ಅನಿವಾರ್ಯವಾಗಿ ಪ್ರತಿಭಟನೆ  ಕೇಂದ್ರದ ಮೇಲೆ ಒತ್ತಡ ಹಾಕಿದ್ರೆ ಅದು ಭಿಕ್ಷೆನಾ    ಸಚಿವ ಹೆಚ್ ಕೆ ಪಾಟೀಲ್

ನವದೆಹಲಿ,ಫೆಬ್ರವರಿ,6,2024(www.justkannada.in): ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ನಾಳೆ ನವದೆಹಲಿಯಲ್ಲಿ ಪ್ರತಿಭಟನೆಗೆ ಕಾಂಗ್ರೆಸ್ ಮುಂದಾಗಿದ್ದು ಈ ಕುರಿತು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಹೆಚ್.ಕೆ ಪಾಟೀಲ್, ಅನಿವಾರ್ಯವಾಗಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ  ಮಾಡುತ್ತಿದ್ದೇವೆ. ನಮ್ಮ ಮಾತಿಗೆ ಬೆಲೆ ಕೊಡ್ತಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದೇವೆ.  ಚುನಾವಣಾ ಸಂದರ್ಭಧಲ್ಲಿ ಈ ರೀತಿ ಅನ್ಯಾಯ ಮಾಡುತ್ತಿದೆ. ಕೇಂದ್ರಕ್ಕೆ ನಮ್ಮ ಹಕ್ಕನ್ನ ನಾವು ಕೇಳುತ್ತಿದ್ದೇವೆ. ಕೇಂದ್ರದ ಮೇಲೆ ಒತ್ತಡ ಹಾಕಿದ್ರೆ ಅದು ಭಿಕ್ಷೆನಾ..? ಎಂದು ಪ್ರಶ್ನಿಸಿದರು.

ನಮ್ಮ ಪಾಲನ್ನ ನಾವು ಕೇಳುತ್ತಿದ್ದೇವೆ.  ಆದ್ರೆ ಕೇಂದ್ರ ನ್ಯಾಯ ಒದಗಿಸಲು ವಿಫಲವಾಗಿದೆ ಅನಿವಾರ್ಯವಾಗಿ ಕೇಂದ್ರದ ವಿರುದ್ದ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

Key words:  protest-against-centre-Minister -HK Patil.

Tags :

.