For the best experience, open
https://m.justkannada.in
on your mobile browser.

ಮುಡಾ ಹಗರಣ ಖಂಡಿಸಿ ಮೈಸೂರಿನ ಸಿಎಂ ನಿವಾಸದಲ್ಲಿ ಪ್ರತಿಭಟನೆ- ಬಿವೈ ವಿಜಯೇಂದ್ರ

11:41 AM Jul 10, 2024 IST | prashanth
ಮುಡಾ ಹಗರಣ ಖಂಡಿಸಿ ಮೈಸೂರಿನ ಸಿಎಂ ನಿವಾಸದಲ್ಲಿ ಪ್ರತಿಭಟನೆ  ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ,10,2024 (www.justkannada.in): ಮೈಸೂರು ನಗರಾಭಿವೃದ್ದಿಯಲ್ಲಿನ ಹಗರಣ ಖಂಡಿಸಿ  ಸಿಎಂ ನಿವಾಸದ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಮುಡಾ ಹಗರಣ ಸಂಬಂಧ  ಮೈಸೂರು ಸಿಎಂ ನಿವಾಸದಲ್ಲಿ ಪ್ರತಿಭಟನೆ  ಮಾಡುತ್ತೇವೆ. ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಅಶ್ವಥ್  ನಾರಾಯಣ್ ಎಲ್ಲರೂ ಭಾಗವಹಿಸುತ್ತಾರೆ ಎಂದರು.

ಮುಡಾದಲ್ಲಿ ಸೈಟ್ ಹಂಚಿಕೆ ವಿಚಾರದಲ್ಲಿ ಹಗರಣ ನಡೆದಿದೆ.  ಪ್ರಕರಣದ ಬಗ್ಗೆ  ಸಿಎಂ ತಪ್ಪು ಮಾಹಿತಿ ನೀಡಲು ಯತ್ನಿಸುತ್ತಿದ್ದಾರೆ.  ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ಮುಖವಾಡ ಕಳಚಿ ಬಿದ್ದಿದೆ.  ಪ್ರತಿ ಹಂತದಲ್ಲೂ ಹಗರಣದ ವಾಸನೆ ಬರುತ್ತಿದೆ. ಮುಡಾ ಹಗರಣದ ಹೊಣೆಯನ್ನ ಸಿಎಂ ಹೊರಬೇಕು ಎಂದರು.

ರಾಜ್ಯದಲ್ಲಿ ಅಭಿವೃದ್ದಿ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು ಭ್ರಷ್ಟಾಚಾರ ರಹಿತ ಆಡಳಿತ ಮಾಡುವುದಾಗಿ ಹೇಳಿದ್ದರು. ಈಗ ಕಾಂಗ್ರೆಸ್ ಸರ್ಕಾರದ ಮುಖ ಕಳಚಿ ಬಿದ್ದಿದೆ.  ಇನ್ನು ವಾಲ್ಮೀಕಿ ನಿಗಮದ ಹಣ ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಿದ್ದಾರೆ.  ವರ್ಗಾವಣೆ ಆದ ಹಣವನ್ನ ಚುನಾವಣೆಗೆ ಬಳಸಿದ್ದಾರೆ ಎಂದು ಕಿಡಿಕಾರಿದರು.

Key words: Protest, Mysore, Muda scam, BY Vijayendra

Tags :

.