HomeBreaking NewsLatest NewsPoliticsSportsCrimeCinema

ಇಬ್ಬರು ಬಿಜೆಪಿ ಶಾಸಕರನ್ನ ದಾರಿತಪ್ಪಿದ ಮಕ್ಕಳು ಎಂದ ಆರ್.ಅಶೋಕ್.

02:55 PM May 24, 2024 IST | prashanth

ಬೆಂಗಳೂರು,ಮೇ,24,2024 (www.justkannada.in):  ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನ ಇಬ್ಬರು ಬಿಜೆಪಿ ಶಾಸಕರಾದ ಎಸ್.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್  ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಆರ್.ಅಶೋಕ್ ಅವರು, ಎಸ್ .ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ದಾರಿ ತಪ್ಪಿದ ಮಕ್ಕಳು.   ಈಗಾಗಲೇ ಇಬ್ಬರಿಗೂ ಪಕ್ಷದಿಂದ ನೋಟಿಸ್ ನೀಡಲಾಗಿದೆ.  ಲೋಖಸಭೆ ಚುನಾವಣೆ  ಫಲಿತಾಂಶದ ಬಳಿಕ  ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಈ ವರ್ಷ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ನಮಗೆ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಲ್ಲದಂತಾಗಿದೆ. ಎಂಪಿ ಚುನಾವಾಣೆ ಫಲಿತಾಂಶ ನೋಡಿ ಸರ್ಕಾರ ನಿರ್ಧರಿಸಬಹುದು. ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೋ ಇಲ್ಲವೋ ಎಂದು ನೋಡಿ ನಂತರ ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ತೀರ್ಮಾನಿಸಬಹುದು ಎಂದು ಕುಟುಕಿದರು.

Key words: R.Ashok, two, BJP MLAs

Tags :
R. Ashok -two BJP MLAs – misguided-children.
Next Article