HomeBreaking NewsLatest NewsPoliticsSportsCrimeCinema

ಸಹೋದರ ಸ್ಟ್ಯಾಲಿನ್‌ ಗೆ  ʼ MYSORE PAK ʼ ಖರೀದಿಸಿದ ರಾಹುಲ್‌ ಗಾಂಧಿ

12:05 PM Apr 13, 2024 IST | mahesh

 

ನವದೆಹಲಿ, ಏ. 13, 2024 : (www.justkannada.in news )   ತಮಿಳುನಾಡಿನ ಮುಖ್ಯಮಂತ್ರಿ ಇಂಡಿಯಾ ಬ್ಲಾಕ್  (INDIA) ಮಿತ್ರ ಎಂ.ಕೆ. ಸ್ಟಾಲಿನ್ ಅವರ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಮೈಸೂರು ಪಾಕ್ ಖರೀದಿಸಿದ ವೀಡಿಯೊವನ್ನು ಕಾಂಗ್ರೆಸ್ ಶುಕ್ರವಾರ ಹಂಚಿಕೊಂಡಿದೆ.

ಕೊಯಮತ್ತೂರಿನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಸ್ಟಾಲಿನ್, ರಾಹುಲ್‌  ಗಾಂಧಿಯನ್ನು "ಪ್ರಿಯ ಸಹೋದರ" ಎಂದು ಉಲ್ಲೇಖಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, "ತಮಿಳುನಾಡಿನ ಪ್ರಚಾರದ ಹಾದಿಗೆ ಸಿಹಿಯ ಸ್ಪರ್ಶವನ್ನು ಸೇರಿಸುತ್ತಾ - ನನ್ನ ಸಹೋದರ ಸ್ಟಾಲಿನ್‌ಗಾಗಿ ಸ್ವಲ್ಪ ಮೈಸೂರು ಪಾಕ್ ಖರೀದಿಸಿದ್ದೇನೆ!" ಎಂದಿದ್ದಾರೆ.

ಚಿಕ್ಕ ವೀಡಿಯೊದಲ್ಲಿ, ರಾಹುಲ್ ಗಾಂಧಿ ಅಂಗಡಿಯೊಂದಕ್ಕೆ ನಡೆದುಕೊಂಡು ಡಿಎಂಕೆ ನಾಯಕನಿಗೆ ಸಿಹಿ ಖರೀದಿಸುತ್ತಿರುವುದನ್ನು ಕಾಣಬಹುದು.

"ಸರ್, ನೀವು ಯಾರಿಗಾಗಿ ಸಿಹಿತಿಂಡಿಗಳನ್ನು ಖರೀದಿಸುತ್ತಿದ್ದೀರಿ,"  ಎಂದು ಮಹಿಳೆಯೊಬ್ಬರು ರಾಹುಲ್‌ ಗಾಂಧಿಯನ್ನು ಕೇಳುತ್ತಾರೆ. ಆಗ, "ನನ್ನ ಸಹೋದರ ಸ್ಟಾಲಿನ್," ಅವರಿಗೆ ಎಂದು ರಾಹುಲ್ ಉತ್ತರಿಸುತ್ತಾರೆ.

ನಂತರ, ಕಾಂಗ್ರೆಸ್ ನಾಯಕರು ಉಪಾಹಾರ ಗೃಹದಿಂದ ಹೊರಡುವ ಮೊದಲು ಅಂಗಡಿಯಲ್ಲಿನ ಸಿಬ್ಬಂದಿ‌ ಜತೆಗೆ ಗ್ರೂಪ್ ಫೋಟೋಗೆ ಪೋಸ್ ನೀಡಿದರು. ರಾಹುಲ್ ಗಾಂಧಿ ಅವರು ಸ್ಟಾಲಿನ್ ಅವರನ್ನು ಭೇಟಿ ಮಾಡಿ ತಮ್ಮ ಉಡುಗೊರೆಯನ್ನು ಡಿಎಂಕೆ ನಾಯಕಗೆ ನೀಡುತ್ತಿರುವುದನ್ನು ತೋರಿಸುವ ಮೂಲಕ  ವೀಡಿಯೊ ಕೊನೆಗೊಳ್ಳುತ್ತದೆ.

ಕೊಯಮತ್ತೂರಿನಲ್ಲಿ ನಡೆದ ರ್ಯಾಲಿಯಲ್ಲಿ ಸ್ಟಾಲಿನ್, ರಾಹುಲ್‌ ಗಾಂಧಿಯವರನ್ನು "ಪ್ರೀತಿಯ ಸಹೋದರ" ಎಂದು ಸ್ವಾಗತಿಸಿದಾಗ ಕಾಂಗ್ರೆಸ್ ಮತ್ತು ಆಡಳಿತಾರೂಢ ಡಿಎಂಕೆ ನಡುವಿನ ಬಾಂಧವ್ಯ ಸ್ಪಷ್ಟವಾಗಿದೆ.

 

ಲೋಕಸಭೆ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ.ಎಸ್ ಈಶ್ವರಪ್ಪ.

ಸ್ಟಾಲಿನ್,  ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು 'ಚುನಾವಣಾ ಹೀರೋ' ಎಂದು ಬಣ್ಣಿಸಿ, ರಾಹುಲ್‌ ಗಾಂಧಿ ತಮ್ಮ ಯಾತ್ರೆಗಳ ಮೂಲಕ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಪಕ್ಷದ ಪ್ರಣಾಳಿಕೆಯನ್ನು ಸಿದ್ದಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪ್ರಣಾಳಿಕೆಯು,  ಡಿಎಂಕೆಯ ಸಾಮಾಜಿಕ ನ್ಯಾಯವನ್ನು ಪ್ರತಿಬಿಂಬಿಸುತ್ತದೆ ಎಂದು ಸ್ಟ್ಯಾಲಿನ್‌ ಹೇಳಿದರು.

ಕೃಪೆ : ಟೈಮ್ಸ್‌ ನೌ

key words :  Rahul Gandhi, buys, Mysore Pak, brother, Stalin

ENGLISH SUMMARY : 

The Congress on Friday shared a video of Rahul Gandhi himself buying Mysore Pak for Chief Minister and INDIA bloc ally MK Stalin during the former's visit to the state. The two opposition leaders addressed an election rally in Coimbatore where Stalin referred to Gandhi as "dear brother".

Tags :
brotherbuysMysore PakRahul GandhiStalin
Next Article