For the best experience, open
https://m.justkannada.in
on your mobile browser.

ಖಾಸಗಿ ಮಸೂದೆ ಮಂಡನೆ, ಸಮಸ್ಯೆ ಬಗೆಹರಿಸುವವರೆಗೆ ಹೋರಾಟ: ರೈತ ನಿಯೋಗಕ್ಕೆ ರಾಹುಲ್ ಗಾಂಧಿ ಭರವಸೆ

04:41 PM Jul 24, 2024 IST | prashanth
ಖಾಸಗಿ ಮಸೂದೆ ಮಂಡನೆ  ಸಮಸ್ಯೆ ಬಗೆಹರಿಸುವವರೆಗೆ ಹೋರಾಟ  ರೈತ ನಿಯೋಗಕ್ಕೆ ರಾಹುಲ್ ಗಾಂಧಿ ಭರವಸೆ

ನವದೆಹಲಿ,ಜುಲೈ,24,2024 (www.justkannada.in): ಎಂಎಸ್ ಪಿ ಗ್ಯಾರಂಟಿ ಕಾನೂನು ಜಾರಿ, ದೇಶದ ರೈತರ ಕೃಷಿ ಸಾಲಮನ್ನಾ ಸಂಬಂಧ ಸಮಸ್ಯೆ ಬಗೆಹರಿಯುವವರೆಗೂ ಹೋರಾಟ ಮಾಡುವುದಾಗಿ ರೈತ ನಿಯೋಗಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.

ಜುಲೈ 22ರಂದು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ರೈತ ಮುಖಂಡರ ಸಮಾವೇಶದ ಸ್ಥಳಕ್ಕೆ ಆಗಮಿಸಿದ ವಿವಿಧ ಪಕ್ಷಗಳ ಇಪ್ಪತ್ತು ಹೆಚ್ಚು ಸಂಸದರು ಮಾತುಕತೆ ನಡೆಸಿ ರೈತ ಮುಖಂಡರನ್ನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆ ಮಾತುಕತೆಗೆ ಆಹ್ವಾನಿಸಿದ್ದರು.

ಈ ಹಿನ್ನೆಲೆಯಲ್ಲಿ  ಇಂದು ಸಂಸತ್ ಭವನ ಕಚೇರಿಯಲ್ಲಿ  ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನ ರೈತ ನಿಯೋಗ ಇಂದು ಭೇಟಿಯಾಗಿ ಸುಮಾರು ಅರ್ಧ ಗಂಟೆ ಕಾಲ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ರೈತ ಮುಖಂಡರ ಜೊತೆ ಎಂಎಸ್ ಪಿ ಗ್ಯಾರಂಟಿ ಕಾನೂನನ ಬಗ್ಗೆ,  ದೇಶದ ರೈತರ ಕೃಷಿ ಸಾಲಮನ್ನಾ ಮಾಡುವ ಬಗ್ಗೆ ಪ್ರಸ್ತಾಪಿಸಿದರು. ಅಲ್ಲದೆ ಸಂಸತ್ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡಿಸುವಂತೆ ರಾಹುಲ್ ಗಾಂದಿಗೆ ರೈತ ಮುಖಂಡರು ಒತ್ತಾಯಿಸಿದರು.

ರಾಷ್ಟ್ರೀಯ ರೈತ ಮುಖಂಡರಾದ ಪಂಜಾಬ್ ನ ಜಗಜಿತ್ ಸಿಂಗ್ ದಲೈವಾಲಾ,ಹರಿಯಾಣದ ಅಭಿಮನ್ಯುಕೂಹರ್. ಕರ್ನಾಟಕದ ಕುರುಬೂರ್ ಶಾಂತಕುಮಾರ್. ತಮಿಳುನಾಡಿನ ಪಾಂಡ್ಯನ್. ತೆಲಂಗಾಣದ ವೆಂಕಟೇಶ್ವರ ರಾವ್.ಲಕ್ವಿನ್ಧರ್ ಸಿಂಗ್,  ಕಿಸಾನ್ ಮಜದೂರ್ ಮೋರ್ಚಾ ಪಾಂಡರ್ ಮತ್ತಿತರರು ವಿವಿಧ ರಾಜ್ಯಗಳ 12 ರೈತ ಮುಖಂಡರು ನಿಯೋಗದಲ್ಲಿದ್ದರು.

ರೈತರ ಸಮಸ್ಯೆ  ಆಲಿಸಿ ಮಾತನಾಡಿದ ರಾಹುಲ್ ಗಾಂಧಿ, ಈ ಬಗ್ಗೆ ಇಂಡಿಯಾ ಒಕ್ಕೂಟ ಸಭೆಯಲ್ಲಿ ಚರ್ಚಿಸಿ ಸಂಸತ್  ಅಧಿವೇಶನದಲ್ಲಿ ಖಾಸಗಿ ಬಿಲ್ ಮಂಡಿಸುವುದಾಗಿ ತಿಳಿಸಿದರು. ಇಡೀ ದೇಶದ ರೈತರ ಪರವಾದ ಎಂಎಸ್ ಪಿ ಗ್ಯಾರಂಟಿ ಕಾನೂನು ಜಾರಿಗೆ ತರುವ ತನಕ ಸ್ವಾಮಿನಾಥನ್ ವರದಿ ಜಾರಿ ಮಾಡುವ ತನಕ,  ರೈತರ ಸಾಲ ಮನ್ನಾ ಮಾಡುವವರೆಗೆ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಸಂಸದರಾದ ವೇಣುಗೋಪಾಲ್ ಜಯರಾಮ್ ರಮೇಶ್. ಲೂಧಿಯಾನ ಸಂಸದ ರಾಜು ಮತ್ತು ಇತರ ಹಲವು ಸಂಸದರು ಉಪಸ್ಥಿತರಿದ್ದರು.

Key words: Rahul Gandhi, promises, farmers delegation

Tags :

.