ಮುಂದಿನ 24 ಗಂಟೆ ಭಾರಿ ಮಳೆ: ಸಮನ್ವಯದಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ- ಡಿಸಿಎಂ ಡಿ.ಕೆ ಶಿವಕುಮಾರ್.
ಬೆಂಗಳೂರು,ಜೂನ್,3,2024 (www.justkannada.in): ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಎಲ್ಲರೂ ಸಮನ್ವಯದಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಳೆ ಅವಾಂತರ ಸಂಬಂಧ ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, 133 ವರ್ಷದ ಬಳಿಕ ಜೂನ್ ನಲ್ಲಿ ಬೆಂಗಳೂರಿನಲ್ಲಿ ಇಷ್ಟು ಪ್ರಮಾಣದ ಮಳೆ ಆಗಿದೆ. ಬೆಂಗಳೂರು ಜನ ಮಳೆಯನ್ನ ಸಂತೋಷದಿಂದ ಸ್ವೀಕರಿಸಿದ್ದಾರೆ. ಯಾರಿಗೂ ತೊಂದರೆ ಆಗಿಲ್ಲ. ಮೂವರಿಗೆ ಮಾತ್ರ ಗಾಯವಾಗಿದೆ. 265 ಮರಗಳು ಬಿದ್ದಿವೆ 95 ಮರಗಳನ್ನ ತೆರವು ಮಾಡಲಾಗಿದೆ. 24 ಗಂಟೆಯೂ ಕಂಟ್ರೋಲ್ ರೂಮ್ ಕೆಲಸ ಮಾಡುತ್ತದೆ. ನನ್ನ ಮನೆಗೂ ಕನೆಕ್ಷನ್ ಕೊಡಿ ಎಂದಿದ್ದೇನೆ ಎಂದರು.
ನಗರದಲ್ಲಿ ಮಳೆಗ 261 ವಿದ್ಯುತ್ ಕಂಬಗಳು ಬಿದ್ದಿವೆ ಒಣಗಿದ ಮರಗಳನ್ನು ಗುರುತಿಸಿ ತೆರವಿಗೆ ಸೂಚನೆ ನೀಡಿದ್ದೇನೆ. ತೊಂದರೆ ಆಗುವ ಕಡೆ ನೀರು ಹೊರಹಾಕಲು ತಂಡರ ಚನೆಗೆ ಸೂಚಿಸಿದ್ದೇನೆ. ಪ್ರತಿ ವಾರ್ಡ್ ಗಳಲ್ಲು ನೀರು ಹೊರಹೋಗಲು ವ್ಯವಸ್ಥೇ ಮಾಡಲು ತಿಳಿಸಿದ್ದೇನ. ನಿನ್ನೆ ಸುರಿದ ಮಳೆಗೆ ಕೆಲ ಹಳೇ ಮನೆಗಳು ಕುಸಿದಿವೆ. ಬೀಳುವ ಮನೆಯನ್ನ ಸರ್ವೇ ಮಾಡಿ ನೋಟಿಸ್ ನೀಡಲು ಸೂಚಿಸಲಾಗಿದೆ. ನೋಟಿಸ್ ನೀಡ ಮನೆ ಸ್ಥಳಾಂತರಕ್ಕೆ ಸೂಚನೆ ನೀಡಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: rain, Bangalore, DCM, DK Shivakumar