HomeBreaking NewsLatest NewsPoliticsSportsCrimeCinema

ಭಾರಿ ಮಳೆ ಹಿನ್ನೆಲೆ: ಕಬಿನಿ ಜಲಾಶಯದ ಒಳಹರಿವು ಪ್ರಮಾಣ ಹೆಚ್ಚಳ

11:01 AM Jun 27, 2024 IST | prashanth

ಬೆಂಗಳೂರು,ಜೂನ್,27,2024 (www.justkannada.in): ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು ರೈತರ ಮೊಗದಲ್ಲಿ ನಗು ತರಿಸಿದೆ. ಈ ಮಧ್ಯೆ   ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳಹರಿವು ಪ್ರಮಾಣ ಹೆಚ್ಚಳವಾಗಿದೆ.

ಕಬಿನಿ ಜಲಾಶಯದ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಒಳ ಹರಿವಿನ ಪ್ರಮಾಆಣ ಹೆಚ್ಚಳವಾಗಿದೆ. 19 52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಕಬಿನಿ ಜಲಾಶಯದಲ್ಲಿ ಸದ್ಯ 11.30 ಟಿಎಂಸಿ ನೀರು ಸಂಗ್ರಹವಾಗಿದೆ.

ಜಲಾಶಯಕ್ಕೆ  ಇಂದಿನ ಒಳಹರಿವಿನ ಪ್ರಮಾಣ 16,977  ಕ್ಯೂಸೆಕ್ ಇದೆ.  ಜಲಾಶಯದಿಂದ 1000 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ.

Key words: rain-increase - inflow -Kabini reservoir

Tags :
Increase...inflowKabini Reservoirrain
Next Article