ಮೈಸೂರು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತೀವ್ರ ಕುಸಿತ: ಎದುರಾಯ್ತು ಸಂಕಷ್ಟ.
ಮೈಸೂರು,ಮೇ,2,2024 (www.justkannada.in): ಕಳೆದ ಬಾರಿ ಮುಂಗಾರು ಮಳೆ ಸರಿಯಾಗಿ ಬೀಳದ ಹಿನ್ನೆಲೆಯಲ್ಲಿ ಬರಗಾಲ ಆವರಿಸಿದ್ದು ಇದೀಗ ಈ ಬಾರಿಯೂ ಪೂರ್ವ ಮುಂಗಾರು ಮಳೆ ಕೈಕೊಟ್ಟಿದೆ. ಮೈಸೂರು ಜಿಲ್ಲೆಯಲ್ಲಿ ಮುಂಗಾರು ಆರಂಭಕ್ಕೂ ಮುನ್ನ ಸುರಿಯಬೇಕಿದ್ದ ಮಳೆಯ ಪ್ರಮಾಣ ತೀವ್ರ ಕುಸಿತವಾಗಿದೆ.
ನಿರೀಕ್ಷೆಗೆ ತಕ್ಕಂತೆ ಬೇಸಿಗೆ ಮಳೆ ಸುರಿಯದ ಹಿನ್ನೆಲೆ ಸಂಕಷ್ಟ ಎದುರಾಗಿದೆ. ಮೈಸೂರು ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 75% ಮಳೆ ಕೊರತೆ ಉಂಟಾಗಿದೆ. ನಾಲ್ಕು ತಿಂಗಳ ಅವಧಿಯಲ್ಲಿ 85 ಮಿ ಮೀ ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ 21 ಮಿ ಮೀ ಮಳೆ ಮಾತ್ರ ಸುರಿದಿದೆ. ಮಳೆ ಕೊರತೆಯಿಂದಾಗಿ ಬಿತ್ತನೆ ಕಾರ್ಯ ಕುಂಠಿತವಾಗಿದ್ದು, ಅಂತರ್ಜಲ ಮಟ್ಟವೂ ತೀವ್ರ ಕುಸಿದಿದೆ.
ಮಳೆ ಕೊರತೆಯಿಂದಾಗಿ ಕೆರೆಕಟ್ಟೆಗಳು ಬರಿದಾಗಿರುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದ್ದು ಜಲಮೂಲಗಳು ಬತ್ತಿಹೋಗಿರುವುದರಿಂದ ಇತ್ತ ಜಲಚರಗಳು ಸಾವನ್ನಪ್ಪುತ್ತಿವೆ. ಅರಣ್ಯದಲ್ಲೂ ಕೆರೆ ಕಟ್ಟೆಗಳು ಒಣಗಿರುವುದರಿಂದ ವನ್ಯಜೀವಿ ಸಂಕುಲ ಕೂಡ ಕಂಗಾಲಾಗಿವೆ.
Key words: rain, Mysore, district, Difficulty