HomeBreaking NewsLatest NewsPoliticsSportsCrimeCinema

KNOW YOUR CANDIDATE : ರಕ್ಷಾ ರಾಮಯ್ಯ , ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ

08:17 PM Apr 14, 2024 IST | mahesh

 

ಹೆಸರು : ರಕ್ಷಾ ರಾಮಯ್ಯ

ಹುದ್ದೆ: ಪ್ರಧಾನ ಕಾರ್ಯದರ್ಶಿ - ಭಾರತೀಯ ಯುವ ಕಾಂಗ್ರೆಸ್

ಲೋಕಸಭೆ: ಚಿಕ್ಕಬಳ್ಳಾಪುರ

ಜಾತಿ :  ಬಲಿಜ (ಒಬಿಸಿ)

ರಕ್ಷಾ ರಾಮಯ್ಯನವರು ಪ್ರಸಿದ್ಧ ಶಿಕ್ಷಣ ತಜ್ಞ ಎಂ.ಎಸ್. ರಾಮಯ್ಯನವರ ಮೊಮ್ಮಗ ಮತ್ತು ಮಾಜಿ ಸಚಿವ, ಹಾಲೀ ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್ ಅವರ ಪುತ್ರ.

ರಕ್ಷಾ ರಾಮಯ್ಯ, ಬೆಂಗಳೂರಿನ ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ವ್ಯಾಸಂಗ. ಬಳಿಕ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ. ನಂತರ ಲಂಡನ್ ನ ಕಾರ್ಡಿಫ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ.

ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ ರಕ್ಷಾ ರಾಮಯ್ಯ, ಕೋವಿಡ್ ಮಹಾಮಾರಿಯ ವೇಳೆ ಸಾವಿರಾರು ಕಾರ್ಮಿಕರಿಗೆ ಎರಡು ಹೊತ್ತಿನ ಊಟದ ಸೌಲಭ್ಯ ಸಿಗುವಂತೆ ಮಾಡಿದರು. ಅಲ್ಲದೇ ವೈದ್ಯಕೀಯ ನೆರವಿನ ಸಹಾಯ ಮಾಡಿದ್ದರು. ಈ ಸಲುವಾಗಿಯೇ , ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎಲ್ಲಾ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಇವರನ್ನು ಆಶಾ ಕಾರ್ಯಕರ್ತೆಯರು ಸನ್ಮಾನಿಸಿದ್ದರು.

ಎಂ.ಎಸ್.ರಾಮಯ್ಯ ಯುವ ಘಟಕದ ಮೂಲಕ ಉದ್ಯೋಗ ಮತ್ತು ಸಾಲಮೇಳವನ್ನು ಆಯೋಜಿಸಿ, ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವಂತೆ, ಆರ್ಥಿಕ ಬಿಕ್ಕಟ್ಟಿನಲ್ಲಿ ಇರುವವರೆಗೆ ಹಣಕಾಸಿನ ನೆರವು ಸಿಗುವಂತೆ ಮಾಡಿದ್ದರು.

ರಕ್ಷಾ ರಾಮಯ್ಯ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ 1999ರಿಂದ ತಳಮಟ್ಟದ ಸ್ವಯಂಸೇವಕರಿಂದ ಹಿಡಿದು 2021ರಲ್ಲಿ ಕೆಪಿವೈಸಿಸಿ ರಾಜ್ಯಾಧ್ಯಕ್ಷರಾಗಿ ಹಾಗೂ 2023ರಲ್ಲಿ ಕಾಂಗ್ರೆಸ್‌ನ ಅತ್ಯುನ್ನತ ಸಂಸ್ಥೆ ಎಐಸಿಸಿ ಸದಸ್ಯರಾಗಿ  25 ವರ್ಷಗಳ ಪೂರೈಕೆ.

ಪ್ರಸಕ್ತ ರಕ್ಷಾ ರಾಮಯ್ಯ, ಭಾರತೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ. ತಳಮಟ್ಟದಿಂದ ಪಕ್ಷದಲ್ಲಿ ಸೇವೆ ಆರಂಭಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಮಿಟಿಯ ರಾಜ್ಯಾಧ್ಯಕ್ಷರಾಗಿ, ಕಾಂಗ್ರೆಸ್‌ - ಎಐಸಿಸಿಯ ಅತ್ಯುನ್ನತ ಮಂಡಳಿಯ ಸದಸ್ಯರಾಗಿ ಸೇವೆ.

ಕಾಂಗ್ರೆಸ್ನಲ್ಲಿ ಮೈಲಿಗಲ್ಲುಗಳು :

1999 - ಮಲ್ಲೇಶ್ವರಂ ಕಾಂಗ್ರೆಸ್ ಘಟಕದಲ್ಲಿ ಪ್ರಧಾನ ಕಾರ್ಯದರ್ಶಿ

2017 - ಬೆಂಗಳೂರು ನಗರ ಜಿಲ್ಲೆಗೆ ಯುವ ಕಾಂಗ್ರೆಸ್ ಉಪಾಧ್ಯಕ್ಷ

2019 - ಸಾಮಾಜಿಕ ಮಾಧ್ಯಮದ IYC ರಾಷ್ಟ್ರೀಯ ಉಸ್ತುವಾರಿ

2021 - KPYCC ರಾಜ್ಯ ಅಧ್ಯಕ್ಷರಾಗಿ ಆಯ್ಕೆ

2022 - IYC ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ

2022 - ಎಐಸಿಸಿ ಸದಸ್ಯರು

2024 - ರಾಷ್ಟ್ರೀಯ ಉಸ್ತುವಾರಿ - ಪೆಹ್ಲಾ ವೋಟ್ ಅಭಿಯಾನ

2024 -  ಕರ್ನಾಟಕ ಟೇಬಲ್ ಟೆನಿಸ್ ಅಸೋಶಿಯೇಶನ್ ಅಧ್ಯಕ್ಷರು

ರಕ್ಷಾ ರಾಮಯ್ಯ ಅವರು 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದತ್ತ ಯುವ ಮತದಾರರನ್ನು ಸೆಳೆಯುವ ಉದ್ದೇಶದಿಂದ "ಯುವಮತ" ಎಂಬ ಅಭಿಯಾನವನ್ನು ಪ್ರಾರಂಭಿಸಿ, 2014 ರಿಂದ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ಹೆಚ್ಚು ಮೊದಲ ಬಾರಿಗೆ ಮತದಾರರನ್ನು ಗಳಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಇದು ದಾಖಲೆ ನಿರ್ಮಿಸಿದೆ.

key words : Raksha Ramaiah, chikaballapura, congress, candidate

Tags :
candidatechikaballapuracongressRaksha Ramaiah
Next Article