HomeBreaking NewsLatest NewsPoliticsSportsCrimeCinema

ರಾಮಲಲ್ಲಾ ಪ್ರಾಣ ಪ್ರತಿಷ್ಠೆ ನೇರಪ್ರಸಾರಕ್ಕೆ ಅಡ್ಡಿ ಬೇಡ- ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಸೂಚನೆ.

11:54 AM Jan 22, 2024 IST | prashanth

ನವದೆಹಲಿ,ಜನವರಿ,22,2024(www.justkannada.in):  ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ಅಡ್ಡಿ ಬೇಡ ಎಂದು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ  ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ತಮಿಳುನಾಡು ಸರ್ಕಾರ ನಿರ್ಬಂಧ ಹೇರಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದರು.


ಈ ಸಂಬಂಧ ಇದೀಗ ರಾಮಲಲ್ಲಾ  ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ಅಡ್ಡಿಪಡಿಸಬಾರದು. ದುರ್ಬಲ ವಾದ ಮುಂದಿಟ್ಟು ನೇರಪ್ರಸಾರಕ್ಕೆ ಅಡ್ಡಿ ಮಾಡದಿರಿ ಎಂದು ಸುಪ್ರೀಂಕೋರ್ಟ್ ನ್ಯಾ. ಸಂಜೀವ್ ಖನ್ನಾ ದೀಪಂಕರ್ ದತ್ತ ಪೀಠ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ ಎನ್ನಲಾಗಿದೆ. ಹಾಗೆಯೇ ನೇರಪ್ರಸಾರಕ್ಕೆ ಅಡ್ಡಿ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ಮುಂದೆ ತಮಿಳುನಾಡು ಸರ್ಕಾರ ತಿಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Ramalalla-prana pratistha-live -telecast - not-obstructed- Supreme - Tamilnadu government.

Tags :
notobstructedRamalalla-prana pratistha-liveSupremeTamilnadu Governmenttelecast
Next Article