ರಣದೀಪ್ ಸಿಂಗ್ ಸುರ್ಜೇವಾಲ ವಸೂಲಿ ಮಾಡಲು ಬಂದಿದ್ದಾರೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
12:04 PM Apr 25, 2024 IST
|
prashanth
ಹುಬ್ಬಳ್ಳಿ,ಏಪ್ರಿಲ್,25,2024 (www.justkannada.in): ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ವಸೂಲಿ ಮಾಡಲು ಬಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ, ರಣದೀಪ್ ಸುರ್ಜೇವಾಲ ರಾಜ್ಯಕ್ಕೆ ವಸೂಲಿ ಮಾಡಲು ಬದಿದ್ದಾರೆ ತಾನೇ ಚಾಣಕ್ಯ ಎಂಬಂತೆ ಮಾತನಾಡುತ್ತಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಡಿಎನ್ ಎ ಚೆಕ್ ಮಾಡಿ. ಇದು ಕಾಂಗ್ರೆಸ್ ಮನಸ್ಥಿತಿ, ಹತಾಶೆಯನ್ನ ತೋರುತ್ತೆ. ದಲಿತರ ಪರ ಅಂತ ಹೇಳಿ ಅಂಬೇಡ್ಕರ್ ಗೆ ಅಮವಾನ ಮಾಡಿದರು ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಾರ್ಟಿಯಲ್ಲಿ ಕಂಟ್ರೋಲ್ ಇಲ್ಲ. ಕಾಂಗ್ರೆಸ್ಸಿಗರು ಸೋಲಿನ ಭಯದಲ್ಲಿ ಏನೇನೋ ಮಾತನಾಡುತಿದ್ದಾರೆ. ಯಾರು ಚೊಂಬು ಕೊಟ್ಟಿದ್ದಾರೆ ಎಂದು ಜನರಿಗೆ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟರು.
Key words: Randeep Singh Surjewala, Union Minister, Prahlad Joshi
Next Article