HomeBreaking NewsLatest NewsPoliticsSportsCrimeCinema

ಶಾಸಕ ಮುನಿರತ್ನ ವಿರುದ್ದ ಅತ್ಯಾಚಾರ ಆರೋಪ ಕೇಸ್: ದೂರು ಆಧರಿಸಿ ಕ್ರಮ- ಗೃಹ ಸಚಿವ ಪರಮೇಶ್ವರ್

11:21 AM Sep 19, 2024 IST | prashanth

ಬೆಂಗಳೂರು,ಸೆಪ್ಟಂಬರ್,19,2024 (www.justkannada.in): ಶಾಸಕ ಮುನಿರತ್ನ ಸೇರಿ 7 ಜನರ ವಿರುದ್ದ ಮಹಿಳೆ ಅತ್ಯಾಚಾರ ಆರೋಪ ಮಾಡಿ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ದೂರು ಆಧರಿಸಿ ಕ್ರಮ ಆಗುತ್ತದೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಜನಪ್ರತಿನಿಧಿ ಈ ರೀತಿ ಮಾಡಿದ್ರೆ ಕಾನೂನಿನಡಿ ಕ್ರಮ ಆಗುತ್ತದೆ. ನಾವು ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.  ನಮಗೆ ದ್ವೇಷದ ರಾಜಕಾರಣ ಅಗತ್ಯವಿಲ್ಲ . ಜನ ನಮ್ಮನ್ನ ಗೆಲ್ಲಿಸಿದ್ದಾರೆ ಅದರ ಪ್ರಕಾರ ಕೆಲಸ ಮಾಡುತ್ತೇವೆ ಎಂದರು.

ಇನ್ನು ಡ್ರಗ್ಸ್ ಜಾಲ ತಡೆಗೆ ಟಾಸ್ಕ್ ಫೊರ್ಸ್ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಡ್ರಗ್ಸ್ ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಪರಪ್ಪನ ಅಗ್ರಹಾರ ಸೇರಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಬೆಂಗಳೂರು ಮೂಲದ ಮಹಿಳೆಯೊಬ್ಬರು ಶಾಸಕ ಮುನಿರತ್ನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ಶಾಸಕ ಮುನಿರತ್ನ ಸೇರಿ 7 ಜನರ ವಿರುದ್ಧ FIR ದಾಖಲಾಗಿದೆ.

Key  words: Rape case, against, Muniratha,  Action, Minister, Parameshwar

Tags :
actionagainstministerMunirathaParameshwarrape case
Next Article