HomeBreaking NewsLatest NewsPoliticsSportsCrimeCinema

ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್: ಸಿದ್ದರಾಮಯ್ಯ ಅವರದ್ದು ಭ್ರಷ್ಟ ಆಡಳಿತ- ಸಿ.ಟಿ ರವಿ ಆರೋಪ

12:27 PM Jul 19, 2024 IST | prashanth

ಬೆಂಗಳೂರು,ಜುಲೈ,19,2024 (www.justkannada.in): ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರವನ್ನ ಅಳವಡಿಸಿಕೊಂಡಿದೆ.ಇಲಾಖೆಗಳಲ್ಲಿ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ. ಈ ರೇಟ್ ಕಾರ್ಡ್ ಫಿಕ್ಸ್ ಸತ್ಯ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಆರೋಪಿಸಿದರು.

ಮುಡಾ, ವಾಲ್ಮೀಕಿ ನಿಗಮದ ಅಕ್ರಮಗಳ ಬೆನ್ನಲ್ಲೇ ಈಗ ದೋಸ್ತಿಗಳು ಸರ್ಕಾರದ ವಿರುದ್ಧ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ ಎಂದು ಗಂಭೀರ ಆರೋಪ  ಮಾಡಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪರಿಷತ್‌ ನ ಬಿಜೆಪಿ, ಜೆಡಿಎಸ್ ಸದಸ್ಯರು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಎಂಎಲ್ ಸಿ  ಸಿ.ಟಿ.ರವಿ,  ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದ ಎಲ್ಲೆ ಮೀರಿದೆ. ಸಿದ್ದರಾಮಯ್ಯ  ಅವರದ್ದು ಭ್ರಷ್ಟ ಸರ್ಕಾರ. ಇಲಾಖೆಗಳಲ್ಲಿ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ.  ಪೊಲೀಸ್ ಇನ್‌ ಸ್ಪೆಕ್ಟರ್ ವರ್ಗಾವಣೆಗೆ 50 ಲಕ್ಷದಿಂದ 1 ಕೋಟಿ ರೂ., ಎಇ 50 ಲಕ್ಷದಿಂದ 75 ಲಕ್ಷ. ತಹಶಿಲ್ದಾರ್ 50 ಲಕ್ಷದಿಂದ 1 ಕೋಟಿ ರೂ. ಬೆಂಗಳೂರು ಎಸಿ 5 ಕೋಟಿ ರೂ. ಎಸಿಪಿ 1.5 ಕೋಟಿಯಿಂದ 2 ಕೋಟಿ,  ಎಇ 20-25 ಲಕ್ಷ, ಎಸಿ (ಬೆಂಗಳೂರು) 5 ರಿಂದ 7 ಕೋಟಿ, ಡಿಸಿ 1 ರಿಂದ 1.5 ಕೋಟಿ ರೂ. ಕೊಡಬೇಕು. ಎಸಿಪಿಗೆ 1 ರಿಂದ 3 ಕೋಟಿ, ಇಂಜಿನಿಯರ್ ಹುದ್ದೆಗೆ  25 ಲಕ್ಷದಿಂದ 1ಕೋಟಿ ಕೊಡಬೇಕು ಹೀಗೆ ರೇಟ್ ಕಾರ್ಡ್ ಫಿಕ್ಸ್ ಮಾಡಿದ್ದಾರೆ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು.

Key words:  Rate card, fix, transfer, corrupt administration, CT Ravi

Tags :
corrupt administrationct ravifixrate cardtransfer
Next Article