For the best experience, open
https://m.justkannada.in
on your mobile browser.

SSLC ಮೌಲ್ಯ ಮಾಪನ ಮಾಡಿದ ಶಿಕ್ಷಕರಿಗೆ ಇನ್ನೂ ಬಾರದ ಸಂಭಾವನೆ.

01:44 PM May 29, 2024 IST | prashanth
sslc ಮೌಲ್ಯ ಮಾಪನ ಮಾಡಿದ ಶಿಕ್ಷಕರಿಗೆ ಇನ್ನೂ ಬಾರದ ಸಂಭಾವನೆ

ಬೆಂಗಳೂರು,ಮೇ,29,2024 (www.justkannada.in): 2023-24 ನೇ ಸಾಲಿನಲ್ಲಿ  ಎಸ್ ಎಸ್ ಎಲ್ ಸಿ ಪರೀಕ್ಷೆ ಮೌಲ್ಯಮಾಪನ ಮಾಡಿದ ಶಿಕ್ಷಕರಿಗೆ ಒಂದೂವರೆ ತಿಂಗಳಾದರೂ ಮೌಲ್ಯಮಾಪನದ ಸಂಭಾವನೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಮಾರ್ಚ್ 25ರಿಂದ ಏಪ್ರಿಲ್ 6 ರವರೆಗೆ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆದಿತ್ತು.  ಏಪ್ರಿಲ್ 15ರಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಿತ್ತು. ಮೇ 9 ರಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿತ್ತು.

ಈ ಮಧ್ಯೆ ಇದೀಗ ಎಸ್ ಎಸ್ ಎಲ್ ಸಿ ಪರೀಕ್ಷೆ ಮೌಲ್ಯಮಾಪನ ಮಾಡಿದ ಶಿಕ್ಷಕರಿಗೆ ಸಂಭಾವನೆ ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬಂದಿದೆ.  ಯಾವ ವರ್ಷವೂ ಇಷ್ಟು ತಡವಾಗಿರಲಿಲ್ಲ, SSLC ಫಲಿತಾಂಶ ಬಂದು 15 ದಿನಗಳು ಕಳೆದು ಶಾಲೆ ಪ್ರಾರಂಭವಾಗಿದ್ದರೂ ಶಿಕ್ಷಕರಿಗೆ ಮೌಲ್ಯಮಾಪನ ಸಂಭಾವನೆ ಬರದಿರುವುದು ಶಿಕ್ಷಕರ ಅಸಮಾದಾನಕ್ಕೆ ಕಾರಣವಾಗಿದ್ದು, ಇದೀಗ ಇದು ವಿಧಾನಪರಿಷತ್  ಶಿಕ್ಷಕರ ಕ್ಷೇತ್ರ ಚುನಾವಣಾ ಸಂದರ್ಭದಲ್ಲಿ ಬಹು ಚರ್ಚಿತ ವಿಷಯವಾಗಿದೆ.  ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಿಗೆ ಸಂಭಾವನೆ ಕೊಡಲು ಹಣವಿಲ್ಲವೇ ಎಂಬ ಅನುಮಾನ ಕಾಡುತ್ತಿದೆ ಎಂದು ಮೌಲ್ಯಮಾಪನ ಮಾಡಿದ ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

Key words: Remuneration, SSLC, Assessed, Teachers.

Tags :

.