For the best experience, open
https://m.justkannada.in
on your mobile browser.

ಎಲ್ಲದಕ್ಕೂ ನಟ ದರ್ಶನ್ ಕಾರಣ ಎನ್ನುವುದು ಎಷ್ಟು ಸರಿ..? ಕೋರ್ಟ್ ನಲ್ಲಿ ದರ್ಶನ್ ಪರ ವಕೀಲರ ವಾದ.

05:40 PM Jun 15, 2024 IST | prashanth
ಎಲ್ಲದಕ್ಕೂ ನಟ ದರ್ಶನ್ ಕಾರಣ ಎನ್ನುವುದು ಎಷ್ಟು ಸರಿ    ಕೋರ್ಟ್ ನಲ್ಲಿ ದರ್ಶನ್ ಪರ ವಕೀಲರ ವಾದ

ಬೆಂಗಳೂರು,ಜೂನ್,15,2024 (www.justkannada.in): ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ ಆರೋಪಿಗಳ  ಪೊಲೀಸ್ ಕಸ್ಟಡಿ ನಾಳೆಗೆ ಅಂತ್ಯವಾಗಲಿದ್ದು ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ಎಲ್ಲಾ ಆರೋಪಿಗಳನ್ನ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು ಮತ್ತೆ ಎಲ್ಲಾ ಆರೋಪಿಗಳನ್ನ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಕೋರ್ಟ್ ನಲ್ಲಿ ಮನವಿ ಮಾಡಿದ್ದಾರೆ. ನಟ ದರ್ಶನ್ ಪರ ವಾದ ಮಂಡಿಸಿದ ಅನಿಲ್ ಬಾಬು, ಆರೋಪಿ 5, ಆರೋಪಿ 13 ಕೊಲೆಯಾದ ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಿದ್ದಾರೆಂದು ಕೋರ್ಟ್ ಗಮನಕ್ಕೆ ತರಲಾಗಿದೆ.  ಎಲ್ಲಾ ಆರೋಪಿಗಳ ಫೋನ್ ವಶಕ್ಕೆ ಪಡೆಯಲಾಗಿದೆ. ಆದರೆ ಎಲ್ಲದಕ್ಕೂ ಎ2  ದರ್ಶನ್ ಕಾರಣ ಎನ್ನುವುದು ಎಷ್ಟು ಸರಿ..? ಎಂದು ಪ್ರಶ್ನಿಸಿದ್ದಾರೆ.

ಇನ್ನು ಎ1 ಪವಿತ್ರಾಗೌಡರ ಪರ ವಾದ ಮಂಡಿಸಿದ ವಕೀಲ ನಾರಾಯಣಸ್ವಾಮಿ, ಪವಿತ್ರಾಗೌಡರನ್ನ 6 ದಿನ ಪೊಲೀಸರು ವಿಚಾರಣೆಗೆಗೊಳಡಿಸಿದ್ದಾರೆ.  ಆರೋಪಿಗಳ ಪೈಕಿ ಮಹಿಳೆ ನೋವನ್ನ ಅನುಭವಿಸಿದ್ದಾರೆ. ಅನುಮತಿ ಪಡೆಯದೇ ಮೊಬೈಲ್ ವಶಕ್ಕೆ ಪಡೆದಿದ್ದಾರೆ.  ರಿಮ್ಯಾಂಡ್  ಅರ್ಜಿ ನೀಡ್ತಿಲ್ಲ ಈಗಾಗಲೇ 5 ದಿನ ಕಸ್ಟಡಿ ತೆಗೆದುಕೊಂಡಿದ್ದರೆ. ಅಲ್ಲದೆ ಹೇಳಿಕೆಗಳು ಸೋರಿಕೆ ಆಗುತ್ತಿದೆ ಎಂದು ವಾದಿಸಿದರು.

Key words: renukaswamy,  murder, case, actor,  Darshan, court

Tags :

.