For the best experience, open
https://m.justkannada.in
on your mobile browser.

ರೇಣುಕಾಸ್ವಾಮಿ ಕೊಲೆ ಕೇಸ್: ವಿಚಾರಣೆಗೆ ಹಾಜರಾಗುವಂತೆ ಹಾಸ್ಯ ನಟ ಚಿಕ್ಕಣ್ಣಗೆ  ನೋಟಿಸ್.

02:36 PM Jun 17, 2024 IST | prashanth
ರೇಣುಕಾಸ್ವಾಮಿ ಕೊಲೆ ಕೇಸ್  ವಿಚಾರಣೆಗೆ ಹಾಜರಾಗುವಂತೆ ಹಾಸ್ಯ ನಟ ಚಿಕ್ಕಣ್ಣಗೆ  ನೋಟಿಸ್

ಬೆಂಗಳೂರು,ಜೂನ್,17,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯ ನಟ ಚಿಕ್ಕಣ್ಣಗೂ  ಸಂಕಷ್ಟ ಎದುರಾಗಿದೆ.

ಇಂದೇ ವಿಚಾರಣೆಗೆ ಹಾಜರಾಗುಂತೆ ಹಾಸ್ಯ ನಟ ಚಿಕ್ಕಣ್ಣಗೆ ಪಶ್ಚಿಮ ವಿಭಾಗದ ಪೊಲೀಸರು  ನೋಟಿಸ್  ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು. ಕೊಲೆ ನಡೆದ ಜೂನ್‌ 8 ಶನಿವಾರದಂದು ನಟ ದರ್ಶನ್‌  ಆರ್‌ಆರ್‌ ನಗರದ ಸ್ಟೋನಿಬ್ರೂಕ್‌ ಪಬ್‌ನಲ್ಲಿ ಮಧ್ಯಾಹ್ನದಿಂದ ಪಾರ್ಟಿ ಮಾಡಿದ್ದರು.  ಕೊಲೆಗೂ ಮುನ್ನ ಈ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಹಾಸ್ಯನಟ ಚಿಕ್ಕಣ್ಣ ಭಾಗಿಯಾಗಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಈಗ ತುರ್ತು ವಿಚಾರಣೆಗೆ ಹಾಜರಾಗುವಂತೆ  ಚಿಕ್ಕಣ್ಣಗೆ ನೋಟಿಸ್ ನೀಡಿದ್ದಾರೆ. ನಟ ಚಿಕ್ಕಣ್ಣರನ್ನ ಸಾಕ್ಷಿಯಾಗಿ ಪರಿಗಣಿಸುವ ಸಾಧ್ಯತೆ ಇದೆ.

Key words: Renukaswamy, murder, case, Notice, Chikkanna

Tags :

.