For the best experience, open
https://m.justkannada.in
on your mobile browser.

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ.

03:42 PM Jun 14, 2024 IST | prashanth
ರೇಣುಕಾಸ್ವಾಮಿ ಹತ್ಯೆ ಪ್ರಕರಣ  ಮತ್ತಿಬ್ಬರು ಆರೋಪಿಗಳ ಬಂಧನ

ಬೆಂಗಳೂರು,ಜೂನ್,14,2024 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಪ್ರಕರಣದ 6ನೇ ಆರೋಪಿ ಜಗ್ಗು ಅಲಿಯಾಸ್ ಜಗದೀಶ್ , 7ನೇ ಆರೋಪಿ ಅನಿ ಅಲಿಯಾಸ್ ಅನೀಲ್ ಬಂಧಿತರು. ಚಿತ್ರದುರ್ಗದಲ್ಲಿ ಕಾಮಾಕ್ಷಿ ಪಾಳ್ಯ ಮತ್ತು ಚಿತ್ರದುರ್ಗ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಹತ್ಯೆ ಬಳಿಕ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದರು. ಇದೀಗ ಇಬ್ಬರು ಆರೋಪಿಗಳನ್ನ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ ಎನ್ನಲಾಗಿದೆ. ಈ ಮೂಲಕ ಈವರೆಗೆ ನಟ ದರ್ಶನ್ , ಪವಿತ್ರಾಗೌಡ ಸೇರಿ 16 ಮಂದಿ ಆರೋಪಿಗಳ ಬಂಧನವಾಗಿದೆ.

Key words: Renukaswamy –murder-case- Two - arrested

Tags :

.