HomeBreaking NewsLatest NewsPoliticsSportsCrimeCinema

ರಾಜೀನಾಮೆ ನೀಡುವಂತೆ ನಾನು ಬಿ. ನಾಗೇಂದ್ರಗೆ ಹೇಳಿಲ್ಲ- ಸಿಎಂ ಸಿದ್ದರಾಮಯ್ಯ.

01:58 PM Jun 03, 2024 IST | prashanth

ಬೆಂಗಳೂರು,ಜೂನ್,3,2024 (www.justkannada.in): ಎಸ್.ಟಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ, ಹಣ ವರ್ಗಾವಣೆ ಪ್ರಕರಣ ಸಂಬಂಧ ರಾಜೀನಾಮೆ ನೀಡುವಂತೆ ನಾನು ಬಿ. ನಾಗೇಂದ್ರಗೆ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಈ ಕುರಿತು ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಕರಣ ಸಂಬಂಧ ಎಸ್ ಐಟಿ ರಚನೆಯಾಗಿ ಇನ್ನೂ ಎರಡು ದಿವಸ ಆಗಿದೆ. ಎಸ್ ಐಟಿ ಅಧಿಕಾರಿಗಳು ವರದಿ ನೀಡಿಲ್ಲ. ನಾನು ನಾಗೇಂದ್ರಗೆ ರಾಜೀನಾಮೆ ನೀಡುವಂತೆ ಸೂಚಿಸಿಲ್ಲ ಎಂದರು.

ಸಿಎಂಗೆ ನಾಗೇಂದ್ರರಿಂದ ಬೆದರಿಕೆ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನನಗೆ ಯಾವ ಬೆದರಿಕೆಯೂ ಇಲ್ಲ. ಸಚಿವ ನಾಗೇಂದ್ರ ಬಳಿಯಿಂದ ನಾನು ಯಾವುದೇ  ವಿವರಣೆ  ಕೇಳಿಲ್ಲ ಎಂದರು.

Key words:  resign, Minister, B. Nagendra, CM Siddaramaiah

Tags :
resign-Minister-B. Nagendra - CM Siddaramaiah
Next Article