HomeBreaking NewsLatest NewsPoliticsSportsCrimeCinema

ಶಾಲೆಗಳಲ್ಲಿ ಸ್ವಚ್ಚತೆ ಜವಾಬ್ದಾರಿ ಎಸ್ ಡಿಎಂಸಿ ಹೆಗಲಿಗೆ: ಈ ಸಂಬಂಧ ಅಧಿಸೂಚನೆ- ಸಚಿವ ಮಧು ಬಂಗಾರಪ್ಪ.

03:14 PM Dec 29, 2023 IST | prashanth

ಶಿವಮೊಗ್ಗ,ಡಿಸೆಂಬರ್,29,2023(www.justkannada.in): ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಇದೀಗ ಎಚ್ಚೆತ್ತುಕೊಂಡಿರುವ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದೆ.

ಈ ಸಂಬಂಧ ಶಿವಮೊಗ್ಗದಲ್ಲಿ ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಲೆಗಳಲ್ಲಿನ  ಸ್ವಚ್ಛತೆಯ ಜವಾಬ್ದಾರಿಯನ್ನ ಶಾಲಾ ಶಿಕ್ಷಕರ ಜೊತೆ ಎಸ್ ಡಿಎಂಸಿ ತೆಗೆದುಕೊಳ್ಳಬೇಕು. ಈ ಸಂಬಂಧ ಅಧಿಸೂಚನೆ ಹೊರಡಿಸುತ್ತೇವೆ ಎಂದಿದ್ದಾರೆ.

ಶಾಲಾಮಕ್ಕಳಿಂದ ಶೌಚಾಲಯ ಸ್ವಚ್ಚಗೊಳಿಸಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇಲಾಖೆಯಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ.  ಶಾಲಾ ಮಕ್ಕಳಿಂದ ಯಾವುದೇ ಕೆಲಸ ಮಾಡಿಸಬಾರದು. ಇದರಿಂದ ಇಲಾಖೆಗೆ, ಸರ್ಕಾರಕ್ಕೆ  ಕೆಟ್ಟ ಹೆಸರು ಬರುತ್ತದೆ.  ಶಾಲಾ ಸ್ವಚ್ಚತೆ  ಕಾಪಾಡುವುದು ಕೇವಲ ಶಿಕ್ಷಕರ ಜವಾಬ್ದಾರಿಯಲ್ಲ. ಎಸ್ ಡಿಎಂಸಿಯೂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Key words: Responsibility - cleanliness - schools – SDMC-Minister-Madhu Bangarappa.

Tags :
madhu bangarappaministerResponsibility - cleanliness - schools – SDMC
Next Article