HomeBreaking NewsLatest NewsPoliticsSportsCrimeCinema

ಸಬ್ ರಿಜಿಸ್ಟರ್ ಕಚೇರಿಗೆ ಕಂದಾಯ ಸಚಿವ‌ ಕೃಷ್ಣ ಭೈರೇಗೌಡ ಭೇಟಿ.

05:27 PM Jan 24, 2024 IST | prashanth

ಕಲಬುರಗಿ,ಜನವರಿ,24,2024(www.justkannada.in): ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆಗೆ ಡಿ.ಸಿ. ಕಚೇರಿ ಆಗಮಿಸಿದಾಗ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟರ್ ಕಚೇರಿಗೆ ಭೇಟಿ ನೀಡಿದರು.

ಕಚೇರಿ ಹೊರಗಡೆ ಜನಜಂಗುಳಿ ಕಂಡ‌ ಸಚಿವ ಕೃಷ್ಣಭೈರೇಗೌಡ, ಸಾರ್ವಜನಿಕರನ್ನು ನೊಂದಣಿಗೆ ಸಮಯ ನೀಡಿಲ್ವಾ ಎಂದು ಪ್ರಶ್ನಿಸಿದರು. ಎಲ್ಲರು ಒಂದೆ ಸಮಯಕ್ಕೆ ಬಂದಿರುವುದನ್ನು ಗಮನಿಸಿದ ಸಚಿವರು, ಇಲ್ಲಿ ಟೋಕನ್ ಸಿಸ್ಟಮ್ ಪಾಲಿಸುತ್ತಿಲ್ವಾ ಎಂದು ಸಬ್ ರಿಜಿಸ್ಟಾರ್ ಪಿ.ಶ್ರಿಕಾಂತ ಅವರನ್ನು ಪ್ರಶ್ನಿಸಿದರು. ಪಿ.ಶ್ರೀಕಾಂತ ಉತ್ತರಿಸಿ ಸಾರ್ವಜನಿಕರಿಗೆ ಪೋರ್ಟಲ್ ನಲ್ಲಿ ಸಮಯ ನೀಡಿದ್ದಂತೆ ಮೊದಲು ಬಂದವರಿಗೆ ಅದ್ಯತೆ ನೀಡಲಾಗುತ್ತಿದೆ ಎಂದರು.

ಕಾವೇರಿ ತಂತ್ರಾಂಶದಲ್ಲಿ ಸಾರ್ವಜನಿಕರ ಆಸ್ತಿ ನೊಂದಣಿಗೆ ಸ್ವಯಂ ಸಮಯ ದಿನಾಂಕ ನಿಗದಿಪಡಿಸಲು ಅವಕಾಶ ನೀಡಲಾಗಿದೆ. ಅದರಂತೆ ಸಮಯ ನಿಗದಿ ಮಾಡಿಕೊಂಡು ನಿಗದಿತ ಸಮಯಕ್ಕೆ ಬರುವವರನ್ನು ಮೊದಲು ಆದ್ಯತೆ ನೀಡಬೇಕುಮ ಉದಾಹರಣೆಗೆ 10 ಗಂಟೆಗೆ ನೋಂದಣಿ ಸಮಯ‌ ನೀಡಿದಾಗ ವ್ಯಕ್ತಿ 11 ಗಂಟೆಗೆ ಬಂದಲ್ಲಿ ಅಂತಹವರನ್ನು ಕೂಡಿಸಿ 11 ಗಂಟೆ‌ಗೆ ಸರಿಯಾದ ಸಮಯಕ್ಕೆ ಬಂದವರನ್ನು ಮೊದಲು ಆದ್ಯತೆಯನ್ನಾಗಿ ಪರಿಗಣಿಸಬೇಕು ಎಂದರು.

ಎಲ್ಲರು ಒಮ್ಮೆಲೆ ನೋಂದಣಿಗೆ ಬಂದರೆ ಕೂಡಲು ಜಾಗ ಇರಲ್ಲ, ಕುಡಿಯಲು ನೀರಿರಲ್ಲ. ಮಕ್ಕಳು, ವೃದ್ಧರು, ಮಹಿಳೆಯರು ಬರ್ತಾರೆ. ಕಚೇರಿ ಕೆಲಸ ತಡವಾದಲ್ಲಿ ಸರ್ಕಾರಕ್ಕೆ ಹಿಡಿಶಾಪ ಹಾಕ್ತಾರೆ. ಇದನ್ನೆಲ್ಲ ಅರಿತು ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡಬೇಕು ಎಂದರು.

ಕಂದಾಯ ಆಯುಕ್ತ ಸುನೀಲ್ ಕುಮಾರ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಎ.ಸಿ. ಆಶಪ್ಪ ಪೂಜಾರಿ, ಜಿಲ್ಲಾ ರಿಜಿಸ್ಟಾರ್ ಎಂ.ಎ.ಹಸೀಫ್ ಮತ್ತಿತರಿದ್ದರು.

Key words: Revenue Minister -Krishna Bhairegowda- visited - Sub Register Office.

Tags :
Revenue Minister -Krishna BhairegowdaSub Register Office.visited
Next Article